ಜ್ಞಾನಪೀಠ ಪುರಸ್ಕೃತ ಕೊಂಕಣಿ ಸಾಹಿತಿ ಕೇಳೇಕರ್ ನಿಧನ
ಪಣಜಿ,
ಆ.28: ಜ್ಞಾನಪೀಠ ಪುರಸ್ಕೃತ ಕೊಂಕಣಿ ಸಾಹಿತಿ ಹಾಗೂ ಹಿರಿಯ ಗಾಂಧಿವಾದಿ ರವೀಂದ್ರ ಕೇಳೇಕರ್(85) ಅವರು ಮಡಗಾಂವ್ ನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. id="toptextpromo">ಬಹುಭಾಷಾ
ವಿಶಾರದರಾದ ಕೇಳೇಕರ್ ಅವರು ಇಂಗ್ಲಿಷ್, ಹಿಂದಿ, ಕೊಂಕಣಿ, ಮರಾಠಿ ಮತ್ತು ಗುಜರಾತಿ ಭಾಷೆಯಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. 2007ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದ ಅವರಿಗೆ ಜುಲೈ 31, 2010ರಲ್ಲಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಪ್ರಶಸ್ತಿಯನ್ನು ಕಲಾ ಅಕಾಡೆಮಿಯಲ್ಲಿ ಪ್ರದಾನ ಮಾಡಿದ್ದರು. id='are-slot-1' class='oiad oi-axt oiadv'> id='top-searched-articles'>ಗಾಂಧಿ
ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಕೇಳೇಕರ್ ಹೆಚ್ಚಾಗಿ ಗಾಂಧಿ ಬಗ್ಗೆಯೇ ಬರೆದಿದ್ದಾರೆ. ಕೊಂಕಣಿಗೆ ಅನುವಾದಿಸಿದ್ದ ಮಹಾಭಾರತ ಪುಸ್ತಕ ಸಾಹಿತ್ಯದ ಅತ್ಯ್ಯುತ್ತಮ ಕೃತಿಯಾಗಿದೆ. ಕೇಳೇಕರ್ ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗೋವಾ ಮುಖ್ಯಮಂತ್ರಿ ದಿಗಂಬರ್ ಕಾಮತ್ ವಿಷಾದ ವ್ಯಕ್ತಪಡಿಸಿದ್ದಾರೆ.











Click it and Unblock the Notifications