ಅದಿರು ರಫ್ತು ನಿಷೇಧ ಅಸಾಧ್ಯ : ಕೇಂದ್ರ

ಅಕ್ರಮ ಗಣಿಗಾರಿಕೆ ತಡೆಯುವುದು ಮತ್ತು ಅಕ್ರಮ ಅದಿರು ನಿಲ್ಲಿಸಲು ರಾಜ್ಯ ಸರಕಾರಗಳಿಗೆ ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರಕಾರ ಸಂಪೂರ್ಣವಾಗಿ ಕಬ್ಬಿಣದ ಅದಿರು ರಫ್ತಿನ ಮೇಲೆ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಕೇಂದ್ರ ಗಣಿ ಖಾತೆ ಸಚಿವ ಬಿ ಕೆ ಹಂಡಿಕ್ ಲೋಕಸಭೆಯಲ್ಲಿ ಹೇಳಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ, ಒರಿಸ್ಸಾ ಹಾಗೂ ಜಾರ್ಖಂಡ್ ಗಳಲ್ಲಿ ಆಡಳಿತ ನಿರ್ವಹಣೆ ವೈಫಲ್ಯದಿಂದ ಆಯಾ ರಾಜ್ಯಗಳಲ್ಲಿ ಅಂಕೆ ಮೀರಿದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಕಬ್ಬಿಣದ ಅದಿರು ರಫ್ತಿನ ಮೇಲೆ ನಿಷೇಧ ಹೇರುವ ಬದಲು ಕಬ್ಬಿಣದ ಅದಿರು ಅಕ್ರಮವಾಗಿ ಉತ್ಪಾದನೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಹಂಡಿಕ್ ವಿವರಿಸಿದ್ದಾರೆ
ದೇಶದಲ್ಲಿಯೇ ಎರಡನೇ ಅತೀ ಹೆಚ್ಚು ಕಬ್ಬಿಣದ ಅದಿರು ಉತ್ಪಾದಿಸುವ ರಾಜ್ಯವಾದ ಕರ್ನಾಟಕದಲ್ಲಿ ಕಬ್ಬಿಣದ ಅದಿರು ರಫ್ತಿನ ಮೇಲೆ ನಿಷೇಧ ಹೇರಿಲ್ಲ. ಕಬ್ಬಿಣದ ಅದಿರಿನ ಸಾಗಾಟದ ಮೇಲೆ ನಿಷೇಧ ಹೇರಲಾಗಿದೆಯೇ ಹೊರತು ಅದಿರು ರಫ್ತಿನ ಮೇಲೆ ಅಲ್ಲ ಎಂದು ಸಚಿವರು ಲೋಕಸಭೆಗೆ ವಿವರಿಸಿದರು.












Click it and Unblock the Notifications