ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಮಿತಿ 2 ಲಕ್ಷಕ್ಕೆ ಏರಿಕೆ

By Mahesh
|
Google Oneindia Kannada News

Pranab Mukherjee
ನವದೆಹಲಿ, ಆ.27:ನವದೆಹಲಿ,ಆ.27:ಪ್ರಸ್ತುತ ಚಾಲ್ತಿಯಲ್ಲಿರುವ ಆದಾಯ ತೆರಿಗೆ ನೀತಿ(ಡಿಟಿಸಿ) ಗೆ ಕೇಂದ್ರ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಇಲ್ಲಿಯವರೆಗೆ ಇದ್ದ 1.60 ಲಕ್ಷ ಆದಾಯ ತೆರಿಗೆ ಮಿತಿಯನ್ನು ರು. 2ಲಕ್ಷಕ್ಕೆ ಏರಿಸಲಾಗಿದೆ. ಈ ಮಸೂದೆ ಸಂಸತ್ತಿನಲ್ಲಿ ಒಪ್ಪಿಗೆ ಪಡೆದ ನಂತರ ಮುಂದಿನ ಆರ್ಥಿಕ ವರ್ಷದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಡಿಟಿಸಿ ದೇಶದ ತೆರಿಗೆ ಪದ್ಧತಿಯನ್ನು ಸರಳಗೊಳಿಸುವ ಮತ್ತು ತೆರಿಗೆ ದರಗಳನ್ನು ಕಡಿಮೆ ಮಾಡುವ ಭರವಸೆಯಿದೆ. ಕೇಂದ್ರ ವಿತ್ತ ಸಚಿವಾಲಯ ಆರಂಭದಲ್ಲಿ ಸಿದ್ಧಪಡಿಸಿದ್ದ ಕರಡು ಡಿಟಿಸಿ ಸಂಹಿತೆಯನ್ನು ಉದ್ಯಮಿಗಳು, ಸಾರ್ವಜನಿಕರು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲ ತಿದ್ದುಪಡಿ ಮಾಡಲಾಗಿದೆ.

ಸಂಸತ್ತಿನ ಎರಡೂ ಸದನಗಳಲ್ಲಿ ಈ ಮಸೂದೆಗೆ ಒಪ್ಪಿಗೆ ದೊರೆತರೆ ಮುಂದಿನ ವರ್ಷ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

* ಆದಾಯ ಮಿತಿ 2ರಿಂದ 5 ಲಕ್ಷ ತೆರಿಗೆ ಪ್ರಮಾಣ ಶೇ.10
* ಆದಾಯ ಮಿತಿ 5ರಿಂದ10 ಲಕ್ಷ ತೆರಿಗೆ ಪ್ರಮಾಣ ಶೇ.20
*ಆದಾಯ ಮಿತಿ 10 ಲಕ್ಷದ ನಂತರ ತೆರಿಗೆ ಪ್ರಮಾಣ ಶೇ.30

ಪ್ರಸ್ತುತ ರು.1.6 ಲಕ್ಷದಿಂದ ರು.5 ಲಕ್ಷವರೆಗಿನ ಆದಾಯದ ಮೇಲೆ ಶೇ. 10ರಷ್ಟು, ರು. 5 ಲಕ್ಷದಿಂದ ರು.8 ಲಕ್ಷವರೆಗಿನ ಆದಾಯದ ಮೇಲೆ ಶೇ.20ರಷ್ಟು ಹಾಗೂ ರು. 8 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X