ಬೇಲೇಕೇರಿ ಅದಿರು : ಕಳ್ಳರ ರಕ್ಷಣೆಗೆ ನಿಂತ ಸಿಐಡಿ
ಬೆಂಗಳೂರು,
ಆ. 27 : ಬೇಲೇಕೇರಿ ಅದಿರು ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಮುಗುಮ್ಮಾಗಿ ತನಿಖೆಯ ದಿಕ್ಕನ್ನು ಬದಲಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ. 2 ತಿಂಗಳ ನಂತರ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. id="toptextpromo">ಲೋಕಾಯುಕ್ತರ
ಸೂಚನೆ ಮೇರೆಗೆ ಅದಿರು ನಾಪತ್ತೆ ಪತ್ತೆ ಹಚ್ಚಿದವರು ಅರಣ್ಯಾಧಿಕಾರಿಗಳು. ಆದರೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379ರ ಅಡಿ ಕಳ್ಳತನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೈಕೋರ್ಟ್ ತೀರ್ಪೊಂದರ ಪ್ರಕಾರ, ಅರಣ್ಯ ಪ್ರದೇಶದಲ್ಲಿ ನಡೆಯುವ ಕಳ್ಳಸಾಗಣೆಯನ್ನು ಪೊಲೀಸರೇ ತನಿಖೆ ನಡೆಸಬೇಕು. ಹೀಗಾಗಿ ಹೈಕೋರ್ಟ್ ಸೂಚನೆ ಮೇರೆಗೆ ಕಳೆದ ಮಾರ್ಚ್ 26ರಂದು ಈ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಸೂಚನೆ ನೀಡಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಸಿಐಡಿ
ಪೊಲೀಸರ ಮೇಲೆ ಅನುಮಾನ ಬರಲು ಕಾರಣ ಹಿರಿಯ ಅಧಿಕಾರಿಯೊಬ್ಬರು ನೀಡುತ್ತಿರುವ ಹೇಳಿಕೆ. ಜೂನ್ ತಿಂಗಳಲ್ಲಿ ಸಿಐಡಿ ಪೊಲೀಸರು ತನಿಖೆ ಕೈಗೆತ್ತಿಗೊಂಡಾಗ ಬೇಲೇಕೇರಿ ಬಂದರಿನಲ್ಲಿ 2.5 ಲಕ್ಷ ಟನ್ ಅದಿರು ಇತ್ತು. ಈಗಲೂ ಅದು ಅಲ್ಲೆ ಇದೆ ಎಂಬ ವರಾತ ಶುರುಮಾಡಿಕೊಂಡಿದ್ದಾರೆ.











Click it and Unblock the Notifications