ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ; ಸಂಚಾರ ಅಸ್ತವ್ಯಸ್ತ

ಮುಖ್ಯವಾಗಿ ಮುಂಜಾನೆ ಕಚೇರಿಗಳಿಗೆ ಹೋಗುವವರ ಪಾಡು ದಯನೀಯವಾಗಿತ್ತು. ಮುಂಬರುವ ಎರಡು ಮೂರು ದಿನಗಳಲ್ಲಿ ವರುಣನ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾತಾವರಣದ ಉಷ್ಣಾಂಶದಲ್ಲಿ ಕುಸಿತ ಉಂಟಾಗಿದ್ದು ನೈರುತ್ಯ ಮುಂಗಾರು ಪ್ರಬಲವಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಾದ್ಯಂತ ಭಾರಿ ಮಳೆ ಬೀಳುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಇಲಾಖೆಯ ನಿರ್ದೇಶಕ ಬಿ ಪುಟ್ಟಣ್ಣ ತಿಳಿಸಿದರು.ಬೆಂಗಳೂರಿನಲ್ಲಿ ಇನ್ನೂ ಎರಡು ಮೂರು ದಿನಗಳ ಕಾಲ ಮೋಡ ಮುಚ್ಚಿದ ವಾತಾವರಣ ಇರುತ್ತದೆ.
ಉಷ್ಣತೆಯ ಪ್ರಮಾಣವು ಸಾಮನ್ಯ ಮಟ್ಟಕ್ಕಿಂತ ಕಡಿಮೆಯಾಗಲಿದೆ. ಬೆಂಗಳೂರಿನಲ್ಲಿ ಮಂಗಳವಾರ ಗರಿಷ್ಠ 26.8°C ಮತ್ತು ಕನಿಷ್ಠ 20°C ಉಷ್ಣಾಂಶ ದಾಖಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಮಳೆಯ ಪ್ರಮಾಣ ನಗರದಲ್ಲಿ ಸಾಧಾರಣವಾಗಿ 137 ಮಿಮೀ ಇರುತ್ತದೆ. ಆದರೆ ಈಗಾಗಲೆ 78.3 ಮಿಮೀನಷ್ಟು ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications