ವೇದಾಂತ-ಕೇರ್ನ್ ಡೀಲ್ ಗೆ ಸರ್ಕಾರ ಅಡ್ಡಗಾಲು?

ಇದರಿಂದ ವೇದಾಂತ ಸಮೂಹದ ಖರೀದಿಗೆ ಹಿನ್ನಡೆ ಆಗಲಿದೆ. ಒಎನ್‌ಜಿಸಿ ಈಗ ಕೇರ್ನ್ ನ ರಾಜಾಸ್ತಾನದ ನಿಕ್ಷೇಪದಲ್ಲಿ ಪಾಲುದಾರನೂ ಅಗಿದ್ದು ಶೇ.30ರಷ್ಟು ಪಾಲು ಹೊಂದಿದೆ. ಕೇರ್ನ್ ನ ಖರೀದಿಗೆ ಒಎನ್‌ಜಿಸಿ ಗೂ ಒಂದು ಅವಕಾಶ ನೀಡಬೇಕೆಂದು ತೈಲ ಸಚಿವಾಲಯದ ಹಿರಿಯ ಅಧಿಕಾರಿ ಎಸ್ ಸುಂದರೇಶನ್ ಹೇಳಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದೆ.
ಒಎನ್‌ಜಿಸಿ ಈಗ ಕೇರ್ನ್ ನ ಆಸ್ತಿಯ ಮೌಲ್ಯವನ್ನು ಅಂದಾಜು ಮಾಡುತ್ತಿದ್ದು ಇದು ಪೂರ್ಣಗೊಳ್ಳಲು ಕೆಲ ಸಮಯ ಬೇಕೆನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಲು ವೇದಾಂತ ಮತ್ತು ಕೇರ್ನ್ ವಕ್ತಾರರು ನಿರಾಕರಿಸಿದ್ದಾರೆ.
ವೇದಾಂತ ಹಾಗೂ ಕೇರ್ನ್ ಡೀಲ್ ಸುಮಾರು 8.48 ರಿಂದ 9.6 ಬಿಲಿಯನ್ ಡಾಲರ್ ಮೌಲ್ಯ ಎಂದು ಅಂದಾಜಿಸಲಾಗಿದೆ. ಕೇರ್ನ್ ಖರೀದಿ ಸಫಲವಾದರೆ, ಅನಿವಾಸಿ ಭಾರತೀಯ ಅನಿಲ್ ಅಗರ್ ವಾಲ್ ತನ್ನ ಅಸ್ತಿ ಮೌಲ್ಯವನ್ನು 1,67,000 ಕೋಟಿ ರೂಪಾಯಿಗಳಿಗೆ ಏರಿಸಿಕೊಂಡು ದೇಶದ ಅತಿ ದೊಡ್ಡಕೋಟ್ಯಾಧಿಪತಿಯಾಗಿ ಹೊರಹೊಮ್ಮಲಿದ್ದಾರೆ.












Click it and Unblock the Notifications