ಗೋವಿನ ಹೆಸರಲ್ಲಿ ರಾಜಕೀಯ ಏಕೆ ? ಭಾರದ್ವಾಜ್
ಚಾಮರಾಜನಗರ,
ಆ. 24 : ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಕಿತ ಹಾಕಲು ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಅಭಿಯಾನ ರಾಜಕೀಯ ಪ್ರೇರಿತವಾಗಿದೆ ಎಂದು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ತೀವ್ರವಾಗಿ ಆಕ್ಷೇಪಿಸಿದ್ದಾರೆ. id="toptextpromo">ಗುಂಡ್ಲುಪೇಟೆಯ
ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮಹಿಳಾ ವಿದ್ಯಾರ್ಥಿನಿಲಯ ಉದ್ಘಾಟಿಸಿ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಗೋವಿನ ಸಂಸ್ಕೃತಿಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಹಿಂದೂ ಸಂಸ್ಕೃತಿಯಲ್ಲಿ ಗೋಮಾತೆಗೆ ಪೂಜನೀಯ ಸ್ಥಾನವಿದೆ. ಇದಕ್ಕೆ ನನ್ನ ವಿರೋಧವಿಲ್ಲ. ಆದರೆ, ದೇಶದಲ್ಲಿ ಬಹಸಂಖ್ಯಾತರು ಮಾಂಸಾಹಾರಿಗಳಾಗಿದ್ದಾರೆ. ಅವರ ಹಕ್ಕು ಕಸಿಯುವುದು ಸರಿಯಲ್ಲ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಗೋಹತ್ಯೆ
ಕಾಯ್ದೆ ರಾಷ್ಟ್ರಪತಿಗ ಅಂಗಳದಲ್ಲಿದೆ. ಈ ಕುರಿತು ಬಿಜೆಪಿ ಅನಗತ್ಯ ವಿವಾದ ಸೃಷ್ಟಿಸುತ್ತಿದೆ. ಜನರಲ್ಲಿ ಗೊಂದಲಕ್ಕೆ ಅವಕಾಶ ಮಾಡಿಕೊಡುತ್ತಿದೆ. ಸಮಾಜದ ಭಾವನೆ ಒಡೆಯುವ ಕೆಲಸಕ್ಕೆ ಕೈಹಾಕಿದೆ. ರಾಜ್ಯಾವ್ಯಾಪಿ ಸಮಾವೇಶ ನಡೆಸುವುದು ತಪ್ಪು. ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಅಭಿಯಾನವನ್ನು ಕೂಡಲೇ ಕೈಬಿಡಬೇಕು ಎಂದು ಭಾರದ್ವಾಜ್ ಒತ್ತಾಯಿಸಿದರು.











Click it and Unblock the Notifications