ಮೆಟ್ರೋ ರೈಲಿಗಾಗಿ ನೆಲಕ್ಕುರುಳಿದ ಮನೆಗಳು

ಬೆಳ್ಳಂಬೆಳ್ಳಗೆಯೇ ಸ್ಥಳಕ್ಕೆ ಹಾಜರಾದ ರಾಕ್ಷಸ ಗಾತ್ರದ ಜೆಸಿಬಿ ಯಂತ್ರಗಳು ಅಂಗಡಿಗಳನ್ನು ಕೆಡವತೊಡಗಿದವು. ಮೆಟ್ರೋ ಸಿಬ್ಬಂದಿಗಳ ಈ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಸ್ಥಳೀಯ ನಿವಾಸಿಗಳು ಹಾಗೂ ಅಂಗಡಿ ಮಾಲೀಕರು ನೋಟಿಸ್ ನೀಡದೆ ಮನೆಗಳನ್ನು ಕೆಡವಲಾಗುತ್ತಿದೆ ಎಂದು ದೂರುತ್ತಾ ಪ್ರತಿಭಟನೆಗೆ ಇಳಿದರು.
ಆದರೆ, ನಿವಾಸಿಗಳ ಪ್ರತಿಭಟನೆಯನ್ನು ಲೆಕ್ಕಿಸದ ಮೆಟ್ರೋ ಸಿಬ್ಬಂದಿಗಳು, ಮನೆ, ಅಂಗಡಿಗಳನ್ನು ಕೆಡವ ಕಾರ್ಯ ಮುಂದುವರೆಸಿದರು. ನ್ಯಾಯಾಲಯದಲ್ಲಿ ಈ ಕಾರ್ಯಚರಣೆಗೆ ಇದ್ದ ಅಡ್ಡಿ ಆತಂಕ ದೂರಾಗಿದೆ, ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಬಳಿಕವೇ ಈ ಕಾರ್ಯಾಚರಣೆಗೆ ಮುಂದಾಗಿದ್ದು ಎಂದು ಮೆಟ್ರೋ ಅಧಿಕಾರಿಗಳು ಹೇಳಿದರು.
ಮೆಟ್ರೋ ಅಧಿಕಾರಿಗಳು, ಸ್ಥಳೀಯ ನಿವಾಸಿಗಳ ಆರೋಪ, ಪ್ರತ್ಯಾರೋಪಗಳ ನಡುವೆ ಪೊಲೀಸರು ನಜ್ಜುಗುಜ್ಜಾದರು. ಕೊನೆಗೆ ಪ್ರತಿಭಟನಾ ನಿರತ ಸ್ಥಳೀಯ ನಿವಾಸಿಗಳನ್ನು ತಮ್ಮ ಜೀಪು, ವ್ಯಾನಿನಲ್ಲಿ ಹತ್ತಿಸಿಕೊಂಡು ಮೂರನೇ ಬ್ಲಾಕಿನ ಪೊಲೀಸ್ ಠಾಣೆಗೆ ಹೊರಟರು.












Click it and Unblock the Notifications