ಮಗಳಿಂದ ಪ್ರಧಾನಿಯ ಜೀವನಚರಿತ್ರೆ
ನವದೆಹಲಿ,
ಆ. 23 : ನೈನ್ ಬೈ ನೈನ್ ಎಂಬ ಇಂಗ್ಲಿಷ್ ಕೃತಿಯೊಂದಿಗೆ ಲೇಖಕಿಯಾಗಿ ಗುರುತಿಸಿಕೊಂಡಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಮಗಳು ದಮನ್ ಸಿಂಗ್ ಅವರು ತಮ್ಮ ತಂದೆತಾಯಿಯ ಜೀವನ ಚರಿತ್ರೆ ಬರೆಯುವ ಸಿದ್ಧತೆ ನಡೆಸಿದ್ದಾರೆ. id="toptextpromo">ಈ
ವಿಷಯವನ್ನು ಅವರೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಸ್ತಾಪಿಸಿದ್ದು, ನಾನು ತಂದೆತಾಯಿಯನ್ನು ಕೇವಲ ಒಬ್ಬ ಮಗಳಾಗಿ ನೋಡಿಲ್ಲ. ಒಬ್ಬ ಲೇಖಕಿಯಾಗಿ ವಸ್ತುನಿಷ್ಠವಾಗಿ ಅವರಿಬ್ಬರ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಯತ್ನ ಮಾಡುವುದಾಗಿ ಅವರು ಹೇಳಿದ್ದಾರೆ. ಕಳೆದ ವಾರವಷ್ಟೇ ದಮನ್ ಸಿಂಗ್ ಅವರ 'ದಿ ಸೇಕ್ರೇಡ್ ಗ್ರೋವ್' ಎಂಬ ಇಂಗ್ಲಿಷ್ ಕಾದಂಬರಿ ವಿಮರ್ಶಕರ ಗಮನ ಸೆಳೆದಿದ್ದು, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಬೆಳೆಯುವ ಬಾಲಕ ಕಥಾಹಂದರವನ್ನು ಕಾದಂಬರಿ ಒಳಗೊಂಡಿದೆ. id='are-slot-1' class='oiad oi-axt oiadv'> id='top-searched-articles'>ಈಗಾಗಲೇ
ತಂದೆ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನ ಚರಿತ್ರೆ ಬರೆಯಲು ಕೈಗೆತ್ತಿಕೊಂಡಿರುವುದಾಗಿ ಹೇಳಿದ ಅವರು, ಪುಸ್ತಕಕ್ಕೆ ಹೆಸರಿಟ್ಟಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಡುವಿಲ್ಲದ ರಾಜಕಾರಣದಲ್ಲೂ ತಂದೆ ತಮ್ಮ ಪುಸ್ತಕವನ್ನು ತಿರುವಿ ಹಾಕುತ್ತಾರೆ, ನನ್ನ ಬರವಣಿಗೆಗೆ ತಂದೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ದಮನ್ ಸಿಂಗ್ ಹೇಳಿದ್ದಾರೆ.











Click it and Unblock the Notifications