ಸುಧಾಕರ್ ಎತ್ತಂಗಡಿ, ತನಿಖೆಗೆ ಸಿಎಂ ಆದೇಶ

ಮುಖ್ಯಮಂತ್ರಿಗಳ ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಸುಧಾಕರ್, ಸಾವಿಗೆ ನನ್ನನ್ನು ಬಲಿಪಶು ಮಾಡಲಾಗಿದೆ, ಹಾಗಾಗಿ ಬೇಸರವಿದೆ. ಯಡಿಯೂರಪ್ಪ ನಮ್ಮ ನಾಯಕರು ಅವರ ಎಲ್ಲ ತೀರ್ಮಾನಗಳಿಗೂ ಬದ್ಧನಿದ್ದೇನೆ. ರಾಜೀನಾಮೆ ಕೊಡುತ್ತೇನೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದಿದ್ದಾರೆ.
ನಿಲ್ಲದ ನಿರ್ಗತಿಕರ ಮರಣ: ಸಾವಿನ ಮನೆ ಸಂಖ್ಯೆ 23ಕ್ಕೆ ಏರಿದ್ದು, ನಿಲ್ಲುವ ಸೂಚನೆ ಕಂಡುಬಂದಿಲ್ಲ. ಭಿಕ್ಷುಕರ ಕಾಲೋನಿಗೆ ಭೇಟಿ ನೀಡಿದ ಸಿಎಂಗೆ ಮನವಿ ಮಾಡಿಕೊಂಡಿರುವ ಅಳಿದುಳಿದಿರುವ ಭಿಕ್ಷುಕರು ತಮ್ಮನ್ನು ಇಲ್ಲಿಂದ ಬೇಗ ಹೊರಕ್ಕೆ ಕಳಿಸಿ ಸಾವನ್ನು ಎದುರು ನೋಡುತ್ತಾ ಜೀವಿಸಲಾಗದು ಎಂದು ಗೋಳಾಡಿದ್ದಾರೆ.
ವಾಂತಿ ಭೇದಿ, ಕರಳು ಬೇನೆ ಮುಂತಾದ ಕಾಯಿಲೆಯಿಂದ ಬಳಲುತ್ತಿರುವ 30 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇವರಲ್ಲಿ 10 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.












Click it and Unblock the Notifications