ಬೆಂಗ್ಳೂರಿಂದ ಮಡಿಕೇರಿಗೆ ಮದನಿ ಎತ್ತಂಗಡಿ

Abdul Madani interrogation madikeri
ಬೆಂಗಳೂರು, ಆ. 20: ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ನಾಸಿರ್ ಮದನಿ ಅವರನ್ನು ಮಡಿಕೇರಿಗೆ ಕರೆದುಕೊಂಡು ಹೋಗಲು ಕರ್ನಾಟಕ ಪೊಲೀಸರು ನಿರ್ಧರಿಸಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ಕೊಡಗು ಜಿಲ್ಲೆ ವ್ಯಾಪ್ತಿಗೆ ಆತನನ್ನು ಕರೆದೊಯ್ದು ಅಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಡಿಕೇರಿ ಮತ್ತು ಎರ್ನಾಕುಲಂ ನಲ್ಲಿ ಬಾಡಿಗೆ ಮನೆಗಳನ್ನು ಹಿಡಿದು ಸರಣಿ ಸ್ಫೋಟಕ್ಕೆ ಪಿತೂರಿ ಮಾಡುವ ಸಭೆಗಳನ್ನು ಮದನಿ ತನ್ನ ಸಹಚರರೊಂದಿಗೆ ನಡೆಸಿದ್ದ ಎಂದು ವಿಚಾರಣೆ ಸಮಯದಲ್ಲಿ ಗೊತ್ತಾಗಿರುವುದರಿಂದ ಅವನನ್ನು ಮಡಿಕೇರಿಗೆ ಕರೆದೊಯ್ಯಲಾಗುತ್ತಿದೆ ಎಂದು ಡಿಎನ್ ಎ ಪತ್ರಿಕೆ ವರದಿ ಮಾಡಿದೆ.

ಪ್ರಕರಣದ ಇನ್ನಿಬ್ಬರು ಪ್ರಮುಖ ಆರೋಪಿಗಳಾಗಿರುವ ಟಿ ನಸೀರ್ ಮತ್ತು ಅಬ್ದುಲ್ ರಹೀಂ ಮಡಿಕೇರಿ ಪಿತೂರಿ ಸಭೆಯಲ್ಲಿ ಮದನಿ ಜತೆಗೆ ಇದ್ದರು ಎಂದು ಗೊತ್ತಾಗಿದೆ.

ಆರೋಪಿ ನಸೀರ್ ನನ್ನು ಬೆಂಗಳೂರು ಸ್ಫೋಟಕ್ಕೆ ಮುಂಚೆ ಮತ್ತು ಸ್ಫೋಟದ ನಂತರ ಮದನಿ ಸಂಪರ್ಕಿಸಿದ್ದ ಎನ್ನುವುದಕ್ಕೆ ಪೊಲೀಸರಿಗೆ ಸುಳಿವು ನೀಡುವ ದಾಖಲೆಗಳು ಸಿಕ್ಕಿವೆ. ಇದೇ ವೇಳೆ, ಮದನಿಯನ್ನು ಬೆಂಗಳೂರಿನ ಒಂದು ನಿಗೂಢ ಸ್ಥಳದಲ್ಲಿ ಇಡಲಾಗಿದ್ದು ವಿಚಾರಣೆ ಸುಸೂತ್ರವಾಗಿ ಸಾಗುತ್ತಿದೆ ಎಂದು ಪೊಲೀಸರೇ ಹೇಳಿದ್ದಾರೆ. ಮದನಿಗೆ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ ಹಾಗೂ ರಮ್ ಜಾನ್ ಉಪವಾಸ ವ್ರತ ಮಾಡುವುದಕ್ಕೆ ಆತನಿಗೆ ಅವಕಾಶ ನೀಡಲಾಗಿದೆ ಎಂದು ಈ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+