ನೆಹರು, ಇಂದಿರಾಗಿಂತಲೂ ಮನಮೋಹನ್ ಶ್ರೇಷ್ಠ

ದಕ್ಷಿಣ ದೆಹಲಿ ಕ್ಷೇತ್ರದಿಂದ 1999ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ನನ್ನ ಬಳಿ ಅವರು ಎರಡು ಲಕ್ಷ ರುಪಾಯಿ ಸಾಲ ಪಡೆದಿದ್ದರು. ಆ ಚುನಾವಣೆಯಲ್ಲಿ ಅವರು ಸೋತರಾದರು ಕೆಲ ದಿನಗಳ ನಂತರ ಹಣ ವಾಪಸ್ ಕೊಟ್ಟಿದ್ದಾಗಿ ಖುಷ್ವಂತ್ ಸಿಂಗ್ ತಮ್ಮ ಪುಸ್ತಕ 'ಆಬ್ಸಲ್ಯೂಟ್ ಖುಷ್ವಂತ್' ನಲ್ಲಿ ಬರೆದುಕೊಂಡಿದ್ದಾರೆ.
ಇಂತಹ ಪ್ರಾಮಾಣಿಕತೆಯನ್ನು ಯಾವ ರಾಜಕಾರಣಿಯಿಂದಲೂ ಕಾಣಲು ಸಾಧ್ಯವಿಲ್ಲ ಎಂದು ಖುಷ್ವಂತ್ ಸಿಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೆಹರು ಅವರಿಗೆ ಮುನ್ನೋಟ ಮತ್ತು ವರ್ಚಸ್ಸು ಇತ್ತು. ಆದರೆ ಅವರಿಗೆ ತಮ್ಮದೇ ಆದ ಲೋಪದೋಷಗಳು ಇದ್ದವು. ಅಮೆರಿಕಾ ವಿರೋಧಿಯಾದ ಅವರು ಸೋವಿಯತ್ ಒಕ್ಕೂಟದ ಅಂದಾಭಿಮಾನಿಯಾಗಿದ್ದರು ಎಂದಿದ್ದಾರೆ.
ನೆಹರು ಅವರ ಸಮಾಜವಾದಿ ಧೋರಣೆ ಮತ್ತು ಪಕ್ಷವನ್ನು ಇಂದಿರಾಗಾಂಧಿ ಅವರು ಪಿತ್ರಾರ್ಜಿತ ಆಸ್ತಿ ಎಂದು ತಿಳಿದಂತಿತ್ತು. ಇಂದಿರಾ ಅವರ ನಿಲುವುಗಳನ್ನು ಧಿಕ್ಕರಿಸಿ ಮನಮೋಹನ್ ತಮ್ಮದೆ ಮಾರ್ಗದಲ್ಲಿ ಮುನ್ನಡೆದಿದ್ದಾರೆ. ಖಾಸಗಿಕರಣದ ಮೂಲಕ ರಾಷ್ಟ್ರದ ಆರ್ಥಿಕತೆಯನ್ನು ಸದೃಢಗೊಳಿಸಿದವರು ಮನಮೋಹನ್ ಎಂದು 95 ರ ಹರೆಯದ ಖುಷ್ವಂತ್ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.












Click it and Unblock the Notifications