ಕಿರುಕುಳವೇ ಪ್ರಿಯಾಂಕಾ ಕೊಲೆಗೆ ಕಾರಣ

ಆದರೆ, ತನಿಖೆ ಅಂತಿಮ ಹಂತ ತಲುಪುತ್ತಿದ್ದಂತೆಯೇ ಹೊಸ ವಿವರ ಲಭ್ಯವಾಗುತ್ತಿದೆ. ತಂದೆತಾಯಿಗೆ ಪ್ರಿಯಾಂಕಾ ನೀಡುತ್ತಿದ್ದ ಕಿರುಕುಳ ಹಾಗೂ ಮಾನಸಿಕ ಹಿಂಸೆಯಿಂದ ನೊಂದು ಸತೀಶ್ ಪತ್ನಿಯ ಹತ್ಯೆಗೆ ಮುಂದಾದ ಎಂದು ತಿಳಿದು ಬಂದಿದೆ. ಶ್ರೀಮಂತರ ಮನೆಯಿಂದ ಬಂದ ಪ್ರಿಯಾಂಕ ಸಣ್ಣ ಸಣ್ಣ ಕಾರಣಕ್ಕೂ ಪತಿಯನ್ನು ನಿಂದಿಸುತ್ತಿದ್ದಳು.
ಹೆತ್ತವರಿಗೆ ಗೌರವ ನೀಡುತ್ತಿರಲಿಲ್ಲ. ಸಾಲದ್ದಕ್ಕೆ ಆತನ ಸಹೋದರಿ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಗಾಯಗೊಂಡಾಗ ಆಕೆಯತ್ತ ಕಣ್ಣೆತ್ತಿಯೂ ನೋಡಿರಲಿಲ್ಲ. ಇದರಿಂದ ಸತೀಶ್ ಕೆರಳಿದ್ದರು. ಪತಿ ಜೊತೆ ಜಗಳ ಮಾಡಿ ಬೇರೆ ಮನೆ ಮಾಡುವಂತೆ ಒತ್ತಡ ಹೇರಿದ್ದಳು. ಹೊಸ ಮನೆಗೆ ಬಂದ ನಂತರ ಪೋಷಕರನ್ನೂ ನೋಡಲು ಅವಕಾಶ ನೀಡುತ್ತಿರಲಿಲ್ಲ.
ಜೊತೆಗೆ ವರದಕ್ಷಿಣೆ ಕಿರುಕುಳ ದಾಖಲಿಸಿ ಎಲ್ಲರನ್ನೂ ಜೈಲಿಗೆ ಕಳುಹಿಸಿತ್ತೇನೆ ಎಂದು ಬೆದರಿಸುತ್ತಿದ್ದಳು. ಇದೆಲ್ಲದರಿಂದ ಮುಕ್ತಿ ಪಡೆಯಲು ಪ್ರಿಯಾಂಕಾ ಹತ್ಯೆ ಮಾಡಿದೆ ಎಂದು ಸತೀಶ್ ಪೊಲೀಸರಿಗೆ ಹೇಳಿದ್ದಾನೆ. ಸತೀಶ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಆ.11 ರಂದು ಪ್ರಿಯಾಂಕಾ ಹತ್ಯೆ ನಡೆದಿತ್ತು. ಹುಳಿಮಾವು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.











Click it and Unblock the Notifications