ದೀಪಿಕಾ ಪಡುಕೋಣೆ ಕಾಲಿಗೆ ಬಿದ್ದ ಯುವಕ
ನವದೆಹಲಿ, ಆ. 18 : ಯುವಕನೊಬ್ಬ ತುಂಬಿದ ಸಮಾರಂಭದಲ್ಲಿ ದಿಢೀರಂತ ಕಾಲಿಗೆ ಅಡ್ಡಬಿದ್ದು'ನನ್ನನ್ನು ಮದುವೆಯಾಗುತ್ತೀಯಾ ಡಿಯರ್' ಎಂದು ಚಿತ್ರನಟಿಯೊಬ್ಬಳಿಗೆ ಕೇಳಿದರೆ ಹೇಗಿರುತ್ತೆ ? ಇಂತಹ ವಿಚಿತ್ರ ಆದರೂ ನಿಜ ಸನ್ನಿವೇಶವನ್ನು ಎದುರಿಸಿದಾಕೆ ಬೆಂಗಳೂರಿನ ಬೆಡಗಿ, ಬಾಲಿವುಡ್ ರೋಮಾಂಚನ, ಸ್ನಾನದ ಕೋಣೆ ಇಣಕು ಗಾಸಿಪ್ ಸುದ್ದಿಯ ಕೇಂದ್ರ ಬಿಂದು ದೀಪಿಕಾ ಪಡುಕೋಣೆ.
ನವದೆಹಲಿಯಲ್ಲಿ 'ಲಫಂಗೇ ಫರಿಂದೇ' ಚಿತ್ರದ ಪ್ರಮೋಷನ್ ಗಾಗಿ ಏರ್ಪಡಿಸಲಾಗಿದ್ದ ಸಮಾರಂಭವದಲ್ಲಿ ಇಂಥದೇ ಒಂದು ಘಟನೆ ನಡೆದಿದೆ. ಬಿಳಿ ಸೀರೆ ಮ್ಯಾಚಿಂಗ್ ಧಿರಿಸು ಧರಿಸಿ ಯುವಕರ ಕಣ್ಣು ಕುಕ್ಕುವಂತಿದ್ದ ಸುಂದರಿ ದೀಪಿಕಾ ಮತ್ತು ಚಿತ್ರದ ನಾಯಕ ನಿತಿನ್ ನೇಲ್ ಮುಕೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಮಧ್ಯೆ ಯುವಕನೊಬ್ಬ ನೇರವಾಗಿ ದೀಪಿಕಾ ಪಡುಕೋಣೆ ಬಳಿ ಬಂದು ಏಕಾಏಕಿ 'ಕಾಲಿಗೆ ನಮಸ್ಕರಿಸಿ ನನ್ನನ್ನು ಮದುವೆಯಾಗುವೆಯಾ ಡಿಯರ್' ಎಂದು ಅಂಗಲಾಚಿದನಂತೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಯುವಕನ ಮನವಿಗೆ ಕಸಿವಿಸಿಗೊಳಗಾದ ದೀಪಿಕಾ ನಂತರ ಸಾವರಿಸಿಕೊಂಡು 'ಕ್ಷಮಿಸಿ ನಾನಿನ್ನು ಮದುವೆಗೆ ಮಾಡಿಕೊಳ್ಳಲು ಸಿದ್ಧಳಾಗಿಲ್ಲ'. ಆದರೆ, ನಿಮಗಾಗಿ ಉತ್ತಮ ಚಿತ್ರಗಳನ್ನು ನೀಡಲು ನಾನು ರೆಡಿಯಾಗಿರುವೆ ಎಂದು ಹೇಳುವ ಮೂಲಕ ಯುವಕನ ಮಹದಾಸೆಯನ್ನು ಪೀಸ್ ಪೀಸ್ ಮಾಡಿದರು. ಸುಂದರಿಯರಿಗೆ ಅದೂ ಚಲನಚಿತ್ರ ತಾರೆಯರಿಗೆ ಅಡ್ಡ ಬೀಳುವುದಕ್ಕೆ ಮಂದಿ ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಬೆಂಗಳೂರಿನ ಯುಬಿ ಸಿಟಿಯಲ್ಲಿರುವ ಲಿಕ್ಕರ್ ಮಹಾರಾಜ ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ ಮಲ್ಯ ಕೂಡ ಕ್ಯೂ ನಲ್ಲಿ ಇದ್ದಾನಂತೆ!
ಶಾರೂಕ್ ಖಾನ್ ಅವರ ಓಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್ ಎಂಟ್ರಿ ಪಡೆದ ದೀಪಿಕಾ ಅಲ್ಲಿಂದ ತಿರುಗಿ ನೋಡಿಲ್ಲ. ಆರಂಭದಲ್ಲಿ ಕಪೂರ್ ಕುಟುಂಬದ ಕುಡಿ ರಣಬೀರ್ ಕಪೂರ್ ನೊಂದಿಗೆ ಡೇಟಿಂಗ್ ಮತ್ತು ಲವ್ವಿಡವ್ವಿ ನಡೆಸಿದ್ದು, ನಂತರ ಮುರಿದು ಬಿದ್ದಿದ್ದು ಗೊತ್ತಿರುವುದು ಸಂಗತಿಯೇ. ನಂತರ ಐಪಿಎಲ್ ಕ್ರೀಡಾಕೂಟದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ರಾಯಭಾರಿಯಾದ ದೀಪಿಕಾ, ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ ಅವರೊಂದಿಗೆ ಕುಚುಕುಚು ಶುರು ಮಾಡಿಕೊಂಡಿರುವುದು ಬಾಲಿವುಡ್ ತುಂಬೆಲ್ಲಾ ಗುಲ್ಲಾಗಿದೆ.












Click it and Unblock the Notifications