ಎರಡು ವರ್ಷದೊಳಗೆ ಮಂದಿರ ನಿರ್ಮಾಣ

ಹನುಮ ಶಕ್ತಿ ಜಾಗರಣೆ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 17 ವರ್ಷಗಳಿಂದ ರಾಮಜನ್ಮಭೂಮಿ ಆಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಹೋರಾಟ ನಡೆಸುತ್ತಿದ್ದು, ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸಲಾಗಿದೆ. ಲಖನೌನಿಂದ ಆರಂಭಿಸಲಾಗಿರುವ ಅಭಿಯಾನ ದೇಶದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಆಸ್ಸಾಂನಿಂದ ಗುಜರಾತ್ ವರೆಗೊ ಪ್ರವಾಸ ಮಾಡಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.
ಹನುಮ ಜಾಗರಣೆಯಂದು ಆರಂಭಿಸಲಾಗಿರುವ ಅಭಿಯಾನ ಮುಂದಿನ ನಾಲ್ಕು ತಿಂಗಳವರೆಗೆ ನಡೆಯಲಿದ್ದು, ಸುಮಾರು 8,000 ಕಾರ್ಯಕ್ರಮಗಳನ್ನು ನವೆಂಬರ್, ಡಿಸೆಂಬರ್ ತಿಂಗಳವರೆಗೆ ನಡೆಸಲಾಗುವುದು. ಈ ಅಭಿಯಾನ ರಾಜಕೀಯ ದುರುದ್ದೇಶದಿಂದ ಮಾಡುತ್ತಿಲ್ಲ. ಶ್ರೀರಾಮನ ಮೇಲಿನ ನಂಬಿಕೆಯಿಂದ ಅಭಿಯಾನ ಕೈಗೊಳ್ಳಲಾಗಿದ್ದು, ಮಂದಿರ ನಿರ್ಮಾಣಕ್ಕೆ ಮುಂದಾಗುತ್ತಿದ್ದೇವೆ ಎಂದು ಅಶೋಕ್ ಸಿಂಘಾಲ್ ಹೇಳಿದರು.
ರಾಮಮಂದಿರ ನಿರ್ಮಾಣಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಳವಳಿ ಆರಂಭಿಸಬೇಕು. ಅದಕ್ಕೆ ಬಿಜೆಪಿಯೂ ಕೈಜೋಡಿಸಬೇಕು ಎಂದು ಸಿಂಘಾಲ್ ಅಭಿಪ್ರಾಯಪಟ್ಟರು. ಉತ್ತರಪ್ರದೇಶ ಬಿಜೆಪಿಗೆ ರಾಜ್ಯಾಧ್ಯಕ್ಷ ಇತ್ತೀಚೆಗೆ ಅಧಿಕಾರ ಸ್ವೀಕರಿಸಿರುವ, ಸೂರ್ಯ ಪ್ರತಾಪ ಸಾಹಿ ಅವರು ಸಿಂಘಾಲ್ ಅವರ ಮನವಿಗೆ ಸ್ಪಂದಿಸಿದ್ದಾರೆ.












Click it and Unblock the Notifications