ಚಂಪಾ ನನ್ನ ವಿರೋಧಿ, ವೈರಿ ಅಲ್ಲ
ಬೆಂಗಳೂರು,
ಆ. 15 : ಚಂಪಾ ನನ್ನ ವೈರಿಯಲ್ಲ. ಕೇವಲ ವಿರೋಧಿ ಮಾತ್ರ ಎಂದು ಸಾಹಿತಿ ಯು ಆರ್ ಅನಂತಮೂರ್ತಿ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ತನುಮನ ಪ್ರಕಾಶನ ಮತ್ತು ಸಂಕ್ರಮಣ ಸಾಹಿತ್ಯ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. id="toptextpromo">ನನ್ನನ್ನು
ಸದಾ ಟೀಕಿಸುವವರಲ್ಲಿ ಚಂಪಾ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ನಮ್ಮಿಬ್ಬರ ನಡುವೆ ಬಹುಕಾಲದಿಂದ ವೈಚಾರಿಕ ಭಿನ್ನಾಭಿಪ್ರಾಯ ಇದ್ದರೂ ಹೋರಾಟದ ವಿಷಯದಲ್ಲಿ ನಮ್ಮಿಬ್ಬರ ನಿಲುವು ಒಂದೇ, ಇದು ಬದಲಾಗದು ಎಂದರು. ಬಲಪಂಥೀಯರು ವೈಚಾರಿಕ ಜಗಳ ಮಾಡಲ್ಲ. ಬದಲಾಗಿ ಪರಸ್ಪರ ದ್ವೇಷ ಸಾಧಿಸುತ್ತಾರೆ. ಆದರೆ, ಎಡಪಂಥೀಯರು ಸತತವಾಗಿ ಜಗಳವಾಡುತ್ತಲೇ ಇರುತ್ತಾರೆ. ಆದರೆ, ಇವರಲ್ಲಿ ಒಳಗೊಳಗೆ ಪ್ರೀತಿ ಇರುತ್ತದೆ. ತಾವು ಹಾಗೂ ಚಂಪಾ ಅದೇ ಮಾದರಿಯ ಎಡಪಂಥೀಯರು ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ನಂತರ
ಮಾತನಾಡಿದ ಚಂಪಾ, ನಾನೊಬ್ಬ ಜಗಳಗಂಟ ನಿಜ. ಆದರೆ, ನಾನಾಗಿಯೇ ಕಾಲು ಕೆದರಿಕೊಂಡು ಜಗಳ ಹೋಗಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಅನ್ನುವ ರೀತಿ ಅನಿವಾರ್ಯವಾದಾಗ ಮಾತಿಗಿಳಿದಿದ್ದೇನೆ, ಜಗಳ ಅಡಿದ್ದೇನೆ ಎಂದು ಹೇಳಿದರು.











Click it and Unblock the Notifications