ಪಿಎಫ್ಐ ಧ್ವಜಾರೋಹಣಕ್ಕೆ ಕೋರ್ಟ್ ಅನುಮತಿ
ಬೆಂಗಳೂರು,
ಆ. 14 : ಸ್ವಾತಂತ್ರ್ಯ ದಿನಾಚರಣೆಯಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಮೈಸೂರು ಮತ್ತು ಉಡುಪಿ ನಗರಗಳಲ್ಲಿ ಧ್ವಜಾರೋಹಣ ನಡೆಸಲು ಕರ್ನಾಟಕದ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ, ಆದರೆ ಮೆರವಣಿಗೆ ನಡೆಸಲು ಬ್ರೇಕ್ ಹಾಕಿದೆ. id="toptextpromo">63ನೇ
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 15ರಂದು ಉಡುಪಿ ಮತ್ತು ಮೈಸೂರಿನಲ್ಲಿ ಪಿಎಫ್ಐ ಕಾರ್ಯಕರ್ತರು ಸಮವಸ್ತ್ರ ಧರಿಸಿ ಮೆರವಣಿಗೆ ನಡೆಸುವ ಮೂಲಕ ಧ್ವಜಾರೋಹಣ ನಡೆಸಲು ಅನುಮತಿ ನೀಡಬೇಕೆಂದು ಉಡುಪಿ ಮತ್ತು ಮೈಸೂರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. id='are-slot-1' class='oiad oi-axt oiadv'> id='top-searched-articles'>ಕಾನೂನು
ಸುವ್ಯವಸ್ಥೆ ಹದೆಗೆಡಲಿದೆ ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಧ್ವಜಾರೋಹಣ ಮತ್ತು ಮೆರವಣಿಗೆ ಎರಡಕ್ಕೂ ಅನುಮತಿ ನಿರಾಕರಿಸಿತ್ತು. ಇದನ್ನು ಪಿಎಫ್ಐ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ ಮೆರವಣಿಗೆ ನಡೆಸಲು ಅನುಮತಿ ನೀಡಲು ನಿರಾಕರಿಸಿತು, ಆದರೆ ಧ್ವಜಾರೋಹಣಕ್ಕೆ ಅನುಮತಿ ನೀಡಿದೆ.











Click it and Unblock the Notifications