ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಶಿಲಾಯುಗದತ್ತ ನಮ್ಮ ಚೆಲುವ ಕನ್ನಡನಾಡು

By * ಬಾಲರಾಜ್ ತಂತ್ರಿ ಕೆ
|
Google Oneindia Kannada News

Load Shedding
ಬೆಂಗಳೂರು, ಆ. 13 : ವಿದ್ಯುತ್ ಸಮಸ್ಯೆ ವಿಚಾರದಲ್ಲಿ ನಾನು ಅಸಹಾಯಕ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಹತಾಶ ನೀಡಿರುವುದು ಮುಂದಿನ ದಿನಗಳಲ್ಲಿ ವಿದ್ಯುತ್ ಕಡಿತದ ಪ್ರಮಾಣ ಹೆಚ್ಚಾಗುವ ಲಕ್ಷಣಗಳು ಇನ್ನಷ್ಟು ಸೂಚಿಸುತ್ತಿದೆ. ಬೆಂಗಳೂರು ನಗರ ಪ್ರದೇಶಗಳಲ್ಲಿ 6 ರಿಂದ 8 ಗಂಟೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಪರಿಸ್ಥಿತಿಯಂತೂ ಚಿಂತಾಜನಕವಾಗಿದೆ. ರಾಜ್ಯಾದ್ಯಂತ ನಗರ, ಪಟ್ಟಣ, ಗ್ರಾಮಾಂತರ ಪ್ರದೇಶ ಸೇರಿದಂತೆ ಒಟ್ಟಾರೆ ಹಿಗ್ಗಾಮುಗ್ಗಾ ವಿದ್ಯುತ್ ಕಡಿತ ಗೊಳಿಸಲಾಗುತ್ತಿದೆ.

ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಜನ ಕಂಗಾಲಾಗಿದ್ದಾರೆ. ನೀರಿನ ಸರಬರಾಜಿನಲ್ಲೂ ಇದರ ಪರಿಣಾಮ ತಟ್ಟಿದೆ. ಮಳೆ ಬರದಿದ್ದರೆ ಮಳೆ ಬರಿಸುವುದು ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿರಲಿಲ್ಲ ಎನ್ನುವುದು ಜನಸಾಮಾನ್ಯರಿಗೆ ತಿಳಿದಿರುವ ವಿಷಯ. ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿಲ್ಲ, ವಿದ್ಯುತ್ ಜಲಾಯನ ಪ್ರದೇಶಗಳಲ್ಲಿ ನೀರಿನ ಮಟ್ಟ ತೃಪ್ತಿದಾಯಕವಾಗಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಆದರೆ ಹಾಗಂತ ಕೈಕಟ್ಟಿ ಅಸಾಹಯಕತೆ ತೋರಿದರೆ ಹೇಗೆ, ಬದಲಿ ವ್ಯವಸ್ಥೆ ಏನೂ ಇಲ್ಲವೇ? ನಾಗರಿಕ ಸೌಲಭ್ಯಗಳಿಂದ ನಾವು ವಂಚಿತರಾಗಿ ಶಿಲಾಯುಗದತ್ತ ಧಾವಿಸುತ್ತಿದ್ದೇವೆ ಅಲ್ಲವೇ?

ಭಾಜಪ ಸರಕಾರಕ್ಕೆ ಕೆಲವು ಪ್ರಶ್ನೆಗಳು:

* ಮಳೆಗಾಲದಲ್ಲೇ ವಿದ್ಯುತ್ ಇಲ್ಲವಾದರೆ ಇನ್ನು ಬೇಸಿಗೆ ಕಾಲದಲ್ಲಿ ಸರಕಾರ ಹೇಗೆ ಅದನ್ನು ನಿಭಾಯಿಸುತ್ತದೆ ?
* ಬಳ್ಳಾರಿ ಮತ್ತು ರಾಯಚೂರು ಶಾಖೋತ್ಪನ್ನ ಘಟಕದಲ್ಲಿ ಒಂದಲ್ಲಾ ಒಂದು ತೊಂದರೆ. ಈ ಜನ್ಮದಲ್ಲಿ ಅದು ರಿಪೇರಿ ಆಗುವುದೇ ಇಲ್ಲವೇ?
* ಉಡುಪಿ ವಿದ್ಯುತ್ ನಿಗಮದಿಂದ ಬರುತ್ತಿದ್ದ 300 ಮೆಗಾವ್ಯಾಟ್ ವಿದ್ಯುತ್ ಸರಬರಾಜಿನಲ್ಲೂ ಯಾಕೆ ತೊಂದರೆ ಉಂಟಾಯಿತು?
* ಭಾರೀ ಪ್ರಚಾರಗಿಟ್ಟಿಸಿಕೊಂಡ ಸಾವಿರಾರು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸರಕಾರದ ಯೋಜನೆಗಳು ಏನಾದವು?
* ಮುಂಗಾರು ಬಿತ್ತನೆ ರಾಜ್ಯದ ಹಲವೆಡೆ ಆರಂಭವಾಗಿದ್ದು, ರೈತರಿಗೆ ಪಂಪ್ ಸೆಟ್ ಗಾದರೂ ವಿದ್ಯುತ್ ಕೊಡಬೇಕಲ್ಲವೇ?
* ಚುನಾವಣೆಯಲ್ಲಿ ಸಮಯದಲ್ಲಿ ವಿದ್ಯುತ್ ಖರೀದಿಸಿ ಮತಗಿಟ್ಟಿಸಿದ ಮೇಲೆ ಲೋಡ್ ಶೆಡ್ಡಿಂಗ್ ಅವ್ಯಾಹತವಾಗಿ ಹೇರುವುದು ಯಾವ ನ್ಯಾಯ?
* ಸಾಧನಾ ಸಮಾವೇಶಕ್ಕೆಂದು ಕೋಟ್ಯಂತರ ರೂಪಾಯಿ ಸುರಿಯುವ ಸರಕಾರ ವಿದ್ಯುತ್ ಖರೀದಿಗೆ ಹಣ ಯಾಕೆ ನೀಡುತ್ತಿಲ್ಲ?
* ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಅವನ ಜೀವನಾಧಾರವಾಗಿರುವ ಮುಂಗಾರು ಬೆಳೆ ಬಿತ್ತುವ ಸಮಯದಲ್ಲಿ ಕರೆಂಟ್ ನೀಡಿಲ್ಲಾಂದ್ರೆ ಹೇಗೆ?
* ಕೆಪಿಟಿಸಿಎಲ್ ಅಧಿಕಾರಿಗಳು ಸರಿಯಾದ ಉತ್ತರ ನೀಡದೆ ನುಣುಚಿಕೊಳ್ಳುತ್ತಿರುವುದು ಏತಕ್ಕೆ?
* ಕರೆಂಟು ಇಲ್ಲದ ಕಾರಣ ಧೋಬಿ ಅಂಗಡಿಯಲ್ಲಿ ನನ್ನ ಬಟ್ಟೆಗಳು ಇಸ್ತ್ರಿ ಆಗುತ್ತಿಲ್ಲ. ಇದಕ್ಕಾರು ಹೊಣೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X