ಭಾಗ್ಯಲಕ್ಷ್ಮಿ ಜೊತೆ ಸೀರೆ ಉಚಿತ
ಬೆಂಗಳೂರು,
ಆ. 13 : ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳ ತಾಯಂದಿರಿಗೆ ಇನ್ನು ಮುಂದೆ ಸೀರೆ ಭಾಗ್ಯ. ಇದು ರಾಜ್ಯ ಸರಕಾರದ ವಿನೂತನ ಯೋಜನೆ. ರಾಜ್ಯದಲ್ಲಿ ಇದುವರೆಗೆ ಭಾಗ್ಯಲಕ್ಷ್ಮಿ ಯೋಜನೆಯ ಲಾಭ 9 ಲಕ್ಷ ಹೆಣ್ಣುಮಕ್ಕಳಿಗೆ ದೊರಕಿದೆ. ಈ ಹೆಣ್ಣುಮಕ್ಕಳ ಅಮ್ಮಂದಿರಿಗೆ ಒಂದು ಜೊತೆ ಉತ್ತಮ ಗುಣಮಟ್ಟದ ಸೀರೆಯನ್ನು ಉಚಿತವಾಗಿ ನೀಡಲು ಸರಕಾರ ನಿರ್ಧರಿಸಿದೆ. id="toptextpromo">ಮಹಿಳಾ
ಮತ್ತು ಮಕ್ಕಳ ಇಲಾಖೆ ಸಚಿವ ಎಂ ಪಿ ನರೇಂದ್ರಸ್ವಾಮಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ತಲಾ 300 ರುಪಾಯಿ ಬೆಲೆಯ ಸೀರೆಯನ್ನು 9 ಲಕ್ಷ ತಾಯಂದಿರಿಗೆ ವಿತರಿಸಲಾಗುವುದು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಇವುಗಳನ್ನು ಪೂರೈಸಲಾಗುವುದು. ಈ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ 30 ಕೋಟಿ ರುಪಾಯಿ ಒದಗಿಸಿದ್ದಾರೆ ಎಂದು ನರೇಂದ್ರಸ್ವಾಮಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಈ
ತಿಂಗಳ 16ರ ನಂತರ ಎಲ್ಲಾ ಜಿಲ್ಲೆಗಳಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಮಾವೇಶ ಆಯೋಜಿಸಿ, ತಾಯಂದಿರು ಮತ್ತು ಫಲಾನುಭವಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಅವರು ವಿವರಿಸಿದರು.











Click it and Unblock the Notifications