ಕಾಮಿ ಸ್ವಾಮಿ ಪುಸ್ತಕ ಮಾರಾಟಕ್ಕೆ ತಡೆಯಾಜ್ಞೆ
ರಾಮನಗರ,
ಆ.12: ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದ ಕುರಿತಂತೆ ಡಿ ಎಂ ಹೆಗಡೆ ಅವರು ಬರೆದಿರುವ 'ಕಾಮಿ ಸ್ವಾಮಿ' ಪುಸ್ತಕ ಮಾರಾಟಕ್ಕೆ ರಾಮನಗರ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. id="toptextpromo">ಸ್ವಾಮಿ
ನಿತ್ಯಾನಂದ ಕುರಿತ ಈ ಪುಸ್ತಕ ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಿತ್ತು. ಪುಸ್ತಕದಲ್ಲಿ ಛಾಯಾಚಿತ್ರಗಳೊಂದಿಗೆ ಸ್ವಾಮಿ ನಿತ್ಯಾನಂದ ರಾಸಲೀಲೆ ಸೇರಿದಂತೆ ಹಲವಾರು ಲೇಖನಗಳಿವೆ. ಈ ಸಂಬಂಧ ಸ್ವಾಮಿ ನಿತ್ಯಾನಂದ ಭಕ್ತರು ನ್ಯಾಯಾಲಯದ ಮೆಟ್ಟಿಲೇರಿದ್ದರು. id='are-slot-1' class='oiad oi-axt oiadv'> id='top-searched-articles'>ಪುಸ್ತಕದಲ್ಲಿ
ಸ್ವಾಮಿ ನಿತ್ಯಾನಂದ ಬಗ್ಗೆ ಅವಹೇಳನಕಾರಿ ಲೇಖನಗಳಿವೆ. ಸ್ವಾಮಿಗಳ ಬಗ್ಗೆ ಹಾಗೆ ಬರೆದಿದ್ದು ನಮಗೆ ನೋವು ತಂದಿದೆ. ಪುಸ್ತಕ ಮಾರಾಟವನ್ನು ಕೂಡಲೆ ನಿಲ್ಲಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ಮುಖ್ಯನ್ಯಾಯಮೂರ್ತಿ ಹುನಗುಂದ ಅವರು 'ಕಾಮಿ ಸ್ವಾಮಿ' ಪುಸ್ತಕ ಮಾರಾಟಕ್ಕೆ ತಡೆಯಾಜ್ಞೆ ನೀಡಿದ್ದಾರೆ.











Click it and Unblock the Notifications