ಪೈಲೆಟ್ ಆಗ್ಬೇಕೆ ಬನ್ನಿ ಇಲ್ಲಿದೆ ಅವಕಾಶ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ಬೇಕಾದ ಅನುಮತಿ ಸಿಕ್ಕಿದೆ. ಇಲ್ಲಿರುವ ಮೂರು ವಿಮಾನ ನಿಲ್ದಾಣಗಳನ್ನು ಕೇಂದ್ರ ಪರಿಶೀಲನೆ ನಡೆಸಿದೆ ಎಂದರು. ಇಲ್ಲಿ ಎರಡು ರೀತಿಯ ತರಬೇತಿ ನೀಡಲಾಗುತ್ತಿದೆ. 30 ಜನ ಅಭ್ಯರ್ಥಿಗಳ ಪ್ರವೇಶಕ್ಕೆ ನಿರ್ಧರಿಸಲಾಗಿದೆ. ಒಂದು ತರಬೇತಿಗೆ 8 ಲಕ್ಷ ರುಪಾಯಿಗಳು ಮತ್ತೊಂದು ತರಬೇತಿಗೆ 12 ಲಕ್ಷ ರುಪಾಯಿಗಳು. ಹೊಸ ಸಿಮ್ಮುಲೇಟರ್ ವೊಂದನ್ನು ಖರೀದಿ ಮಾಡಬೇಕಾಗಿದ್ದು, ಇಲಾಖೆಯಿಂದ 40 ಲಕ್ಷ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಶೇಖರ್ ವಿವರಿಸಿದರು.
ಪದಕ ಗೆದ್ದರೆ 10 ಲಕ್ಷ ರುಪಾಯಿ ಬಹುಮಾನ
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪಟುಗಳು ಪದಕ ಗೆದ್ದರೆ 10 ಲಕ್ಷ ರುಪಾಯಿ ಬಹುಮಾನ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಕಾಮನ್ ವೆಲ್ತ್ ಕ್ರೀಡಾಜ್ಯೋತಿ ರಾಜ್ಯಕ್ಕೆ ಆ.22 ಕ್ಕೆ ಬರುತ್ತಿದ್ದು, ಅದನ್ನು ಅದ್ಧೂರಿಯಾಗಿ ಸ್ವಾಗತಿಸಲು ನಿರ್ಧರಿಸಲಾಗಿದೆ ಎಂದು ಗೂಳಿಹಟ್ಟಿ ಶೇಖರ್ ಹೇಳಿದರು.











Click it and Unblock the Notifications