ರೈತರಿಗಾಗಿ ನಾಲ್ಕು ಜಿಲ್ಲೆಗಳಲ್ಲಿ ಮೆಗಾ ಮಾರುಕಟ್ಟೆ

ತೋಟಗಾರಿಕಾ ಪಿತಾಮಹ ಡಾ.ಎಂ.ಹೆಚ್.ಮರಿಗೌಡ ಅವರ 94ನೇ ಜನ್ಮದಿನದ ಸ್ಮರಣಾರ್ಥ ಲಾಲ್‌ಬಾಗ್‌ನಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮೈಸೂರು ಉದ್ಯಾನ ಕಲಾ ಸಂಘ ಆವರಣದಲ್ಲಿ ಯೋಜಿಸಲಾಗಿದ್ದ ತೋಟಗಾರಿಕೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರು.415 ಕೋಟಿ ವೆಚ್ಚದಲ್ಲಿ ಹಾಸನ, ಶಿವಮೊಗ್ಗ, ಬೆಳಗಾವಿ, ಕೋಲಾರ ಜಲ್ಲೆಗಳಲ್ಲಿ ಬೃಹತ್ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ಸಹಿ ಮಾಡಿ ಅವರು ಮಾತನಾಡಿದರು.
ತೋಟಗಾರಿಕಾ ಕ್ಷೇತ್ರಕ್ಕೆ ಒಂದು ಹೊಸ ಆಯಾಮ ನೀಡಿದ ಡಾ. ಎಂ.ಹೆಚ್.ಮರಿಗೌಡರ ಮೌಲ್ಯಗಳನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಸಂಕಲ್ಪ ಮಾಡಿಕೊಂಡು ತೋಟಗಾರಿಕಾ ಉತ್ಪನ್ನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಅವರು ಅಧಿಕಾರಿಗಳಿಗೆ ಸಲಹೆ ಮಾಡಿದರು.
ರಾಜ್ಯದಿಂದ ಪುಷ್ಪಗಳೂ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳು ವಿದೇಶಗಳಿಗೆ ರಫ್ತಾಗುತ್ತಿರುವುದರಿಂದ 3,000 ಕೋಟಿ ರು.ಗಳ ವಿದೇಶಿ ವಿನಿಮಯವನ್ನು ನೀಡುವ ಮೂಲಕ ರಾಜ್ಯವು ತೋಟಗಾರಿಕೆಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದರು.
ಕಳೆದ ಎರಡು ವರ್ಷಗಳಲ್ಲಿ ರಾಜ್ಯದ 55,000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯನ್ನು ವಿಸ್ತರಿಸಲಾಗಿರುವುದಲ್ಲದೆ 20,000 ಹೆಕ್ಟೇರ್‌ನಲ್ಲಿ ನಡೆದಿರುವ ಸಾವಯವ ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕಾಗಿ 28 ಕೋಟಿ ರೂ.ಗಳ ಸಹಾಯಧನವನ್ನು ನೀಡಲಾಗಿದೆ ಎಂದರು.ರಾಜ್ಯದ 12 ಲಕ್ಷ ರೈತ ಕುಟುಂಬಗಳು ತೋಟಗಾರಿಕೆಯಲ್ಲಿ ತೊಡಗಿದ್ದು, 50 ಲಕ್ಷ ಜನರಿಗೆ ಇದರಿಂದ ಉದ್ಯೋಗ ದೊರಕಿದೆ.
ಸರ್ಕಾರ ಕೂಡ ತೋಟಗಾರಿಕಾ ಬೆಳೆಗಳನ್ನು ಅಭಿವೃದ್ಧಿ ಮಾಡುವ ದಿಸೆಯಲ್ಲಿ ಆಯವ್ಯಯದಲ್ಲಿ 10ಕೋಟಿ ರೂ.ಗಳನ್ನು ಮಾವು ಮಂಡಳಿಗಳನ್ನು ನಿರ್ಮಿಸಲು ಮೀಸಲಿಡಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು 30 ಮಂದಿ ಪ್ರಗತಿಪರ ರೈತರಿಗೆ ಹಾಗೂ ೩ ಮಂದಿ ನರ್ಸರಿದಾರರಿಗೆ ನಗದು ಬಹುಮಾನ ಪಾರಿತೋಷಕಗಳನ್ನು ನೀಡಿ ಸನ್ಮಾನಿಸಿದರು.












Click it and Unblock the Notifications