ವಿವಿ ಹಗರಣಕ್ಕೆ ಆರ್ಎಸ್ಎಸ್ ಎಬಿವಿಪಿ ಕಾರಣ
ಹಿರಿಯೂರು,
ಆ. 3 : ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ನಾನಾ ಹಗರಣಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ. id="toptextpromo">ಶಾಲಾ
ಕಾಲೇಜುಗಳಲ್ಲಿ ಭಯೋತ್ಪಾದನೆ ವಿರೋಧಿ ಜಾಗೃತಿ ಅಭಿಯಾನದ ಹೊಣೆಯನ್ನು ಆರ್ಎಸ್ಎಸ್ ಮತ್ತು ಎಬಿವಿಪಿ ವಹಿಸಿಕೊಂಡ ನಂತರ ರಾಜ್ಯದ ವಿವಿಗಳಲ್ಲಿ ಹಗರಣಗಳು ಹೆಚ್ಚಾಗುತ್ತಿದ್ದು, ಈ ಮೂಲಕ ಕರ್ನಾಟಕಕ್ಕೇ ಕೆಟ್ಟ ಹೆಸರು ಬರುತ್ತಿದೆ. ಉನ್ನತ ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯ ಅಂಕಪಟ್ಟಿ ಹಾವಳಿ ಮಿತಿಮೀರಿದೆ. ನಮ್ಮ ರಾಜ್ಯದ ವಿವಿಗಳಿಗೆ ರಾಜ್ಯಪಾಲರು ಕುಲಪತಿಗಳಾಗಿರುವುದರಿಂದ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕೆಂದು ಡಿಕೆಶಿ ಒತ್ತಾಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪಾದಯಾತ್ರೆ
ಜನತಾದಳದ ಐಡಿಯಾ ಅಲ್ಲ. ಪಾದಯಾತ್ರೆ ಅನ್ನುವುದು ಕಾಂಗ್ರೆಸ್ ಪಕ್ಷದ ಪೇಟೆಂಟ್. ಇದು ನಮ್ಮ ಹಕ್ಕು, ಇದು ನಮ್ಮ ರಕ್ತದಲ್ಲೇ ಅಡಗಿದೆ. ಪಾದಯಾತ್ರೆ ಐಡಿಯಾವನ್ನು ಹೈಜಾಕ್ ಮಾಡಲು "ಪಾದಯಾತ್ರೆ ಏನು ಕುಮಾರಸ್ವಾಮಿ ಅವರ ಅಪ್ಪನ ಮನೆಯ ಆಸ್ತಿಯೇ" ಎಂದು ಶಿವಕುಮಾರ ಪಾದಯಾತ್ರೆಯ ಸಂದರ್ಭದಲ್ಲಿ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.











Click it and Unblock the Notifications