ಭಾರತದಲ್ಲಿ ಮರಣದಂಡನೆ ಇರಲಿ : ಬಾಲಕೃಷ್ಣನ್
ನವದೆಹಲಿ,
ಆ. 2 : ಭಾರತದಲ್ಲಿ ಮರಣದಂಡನೆ ಶಿಕ್ಷೆಯನ್ನು ಇನ್ನೂ ಉಳಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ(ಎನ್ಎಚ್ಆರ್ ಸಿ) ಅಧ್ಯಕ್ಷ ಕೆ ಜಿ ಬಾಲಕೃಷ್ಣನ್ ಹೇಳಿದ್ದಾರೆ. id="toptextpromo">ಈ
ಅಭಿಪ್ರಾಯ ತಮ್ಮ ವೈಯಕ್ತಿಕ ಅನಿಸಿಕೆ ಅಷ್ಟೇ ಹೊರತಾಗಿ ಎನ್ಎಚ್ಆರ್ ಸಿ ಅಭಿಪ್ರಾಯ ಅಲ್ಲವೆಂದೂ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಹಲವು ವಿಧದ ಅಪರಾಧಿಗಳು ಹೆಚ್ಚುತ್ತಿರುವ ಸಂಕೀರ್ಣ ಸಂದರ್ಭದಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿದರೆ ಅದು ಸಮಾಜದಲ್ಲಿ ಪರಿಣಾಮ ಉಂಟು ಮಾಡುತ್ತದೆ. ಭಾರತವು ಮರಣದಂಡನೆಯನ್ನು ನಿರಾಕರಿಸುವ ಸ್ಥಿತಿಯನ್ನು ಇನ್ನೂ ತಲುಪಿಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸುಪ್ರಿಂಕೋರ್ಟಿನ
ನಿವೃತ್ತ ಮುಖ್ಯನ್ಯಾಯಮೂರ್ತಿಗಳಾದ ಬಾಲಕೃಷ್ಣನ್, ಈಗಾಗಲೇ ಮರಣದಂಡನೆ ವಿಧಿಸಿರುವ ಪ್ರಕರಣಗಳನ್ನು ಗಮನಿಸಿದರೆ ಸಾಕು ಅವುಗಳೆಲ್ಲಾ ಅಪರಾಧಿಗಳು ಅದಕ್ಕೆ ಆರ್ಹರೆ ಆಗಿದ್ದಾರೆ. ಅಪರೂಪದಲ್ಲಿ ಅಪರೂಪ ಎನ್ನಿಸುವಂತಾ ಪ್ರಕರಣಗಳಿಗೆ ಮಾತ್ರ ಮರಣದಂಡನೆ ವಿಧಿಸಬೇಕು ಎಂಬ ಅಂಶವನ್ನು ಈಗಾಗಲೇ ಸುಪ್ರಿಂಕೋರ್ಟ್ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.











Click it and Unblock the Notifications