ಅ.18 ರಿಂದ ದತ್ತಮಾಲಾ ಅಭಿಯಾನ: ಮುತಾಲಿಕ್
ಚಿಕ್ಕಮಗಳೂರು,
ಆ.2: ಅಕ್ಟೋಬರ್ 18 ರಿಂದ 22 ರವರೆಗೆ ದತ್ತಮಾಲಾ ಅಭಿಯಾನ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸುದ್ದಿಗಾರರಿಗೆ ತಿಳಿಸಿದರು. id="toptextpromo">ಅ.18
ರಂದು ದತ್ತಮಾಲೆ ಧಾರಣೆ ನಡೆಯಲಿದೆ. ಅ.22 ರಂದು ದತ್ತಪೀಠದಲ್ಲಿ ಪೂಜೆ ಸಲ್ಲಿಸಿ ಭಕ್ತರು ಮಾಲೆ ವಿಸರ್ಜನೆ ಮಾಡಲಿದ್ದಾರೆ. 5 ದಿನಗಳ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ದತ್ತಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮುತಾಲಿಕ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>ದತ್ತಮಾಲೆ
ಅಭಿಯಾನ ಮುಕ್ತಾಯ ಕಾರ್ಯಕ್ರಮಕ್ಕೆ ಶ್ರೀರಾಮ ಸೇನೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರ್ಜುನ್ ಸಂಪತ್ ಮತ್ತ್ತು ಕಾರ್ಯಕಾರಿ ಸದಸ್ಯ ಸಮೀರ್ ದಾರೇಕರ್ ಭಾಗವಹಿಸಲಿದ್ದಾರೆ ಎಂದು ಮುತಾಲಿಕ್ ತಿಳಿಸಿದರು.











Click it and Unblock the Notifications