ಪಾದಯಾತ್ರೆ ಬಗ್ಗೆ ಕೆಲವು ಚುಟುಕುಗಳು

* ಸಿದ್ರಾಮಣ್ಣನ ಆರೋಗ್ಯ :-
ಡಾಕ್ಟರ್ ಹೇಳಿದ್ದು
ದಿನಾ ಬೆಳ್ಳಿಗೆ
ಒಂದು ವಾಕಿಂಗ್
ರಾತ್ರಿಗೊಂದು ಮಾತ್ರೆ!
ಮಾತ್ರೆ ನುಂಗಿದ
ಸಿದ್ರಾಮಣ್ಣ
ಮಾಡುತ್ತಿರೋದು
ಪಾದಯಾತ್ರೆ!!
* ಕಲ್ಲುಬಂಡೆ :-
ಏಷ್ಟು ನೆಡೆದರೂ
ಸುಸ್ತಾಗಲ್ಲ ಇವರು
ಒಂತರಾ ಕಲ್ಲುಬಂಡೆ !
ಗುಂಡುಕಲ್ಲಿನಂತಿರುವ
ಇವರೇ ನಮ್ಮ
ದೇಶಪಾಂಡೆ !!
* ಬೇಕಾಗಿದ್ದಾರೆ :-
ಮಸಾಜು
ಮಾಡುವವರು
ಬೇಕಂತೆ
ಸಿದ್ರಾಮಣ್ಣನ
ಕಾಲಿಗೆ !
ಮತ್ತು
ಶ್ರೀರಾಮಲು
ತಲೆಗೆ !!
* ನೋಡ್ರಪ್ಪ ನೋಡ್ರಿ :-
ಸಿದ್ರಾಮಣ್ಣನ
ಫ್ಯಾಶನ್
ಷೋ !
ಸೊಂಟಕ್ಕೆ ಲುಂಗಿ
ಕಾಲಿಗೆ
ನೈಕಿ ಶೂ!
* ಮಾಡೆಲ್ಸ್ :-
ರ‌್ಯಾಪ್ ಮೇಲೆ
ನೆಡೆಯುವವರು
ಬರೀ ಮಾಡೆಲ್ಸ್ !
ರೋಡ್ ಮೇಲೆ
ನೆಡೆಯುವವರು
ರೋಲ್ ಮಾಡೆಲ್ಸ್ !!












Click it and Unblock the Notifications