ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮಾ ಗಾಂಧೀಜಿ ಕಿವಿ ಕಿತ್ತ ದುರುಳರು

By * ಕೆ.ಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

Mahatma Gandhiji Idol, Shivamogga
ಶಿವಮೊಗ್ಗ,ಜು.29: ಇಲ್ಲಿನ ಅಣ್ಣಾನಗರ ಮುಖ್ಯ ರಸ್ತೆಯ ಲಕ್ಷ್ಮಿ ಕ್ಯಾಂಟೀನ್ ಬಳಿ ಪ್ರತಿಷ್ಠಾಪಿಸಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆಯ ಕಿವಿಯನ್ನು ಕಿತ್ತು ವಿರೂಪಗೊಳಿಸಿದ ಘಟನೆ ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದ್ದು, ಇದನ್ನು ವಿರೋಧಿಸಿ ಕಟ್ಟೆಗೆಳೆಯರ ಬಳಗದ ಕಾರ್ಯಕರ್ತರು ಇಂದು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಮುಂಜಾನೆ 3 ಗಂಟೆ ಸುಮಾರಿಗೆ 15 ಮಂದಿ ಯುವಕರ ಗುಂಪು ಈ ಕೃತ್ಯವೆಸಗಿದ್ದು, ಕೂಡಲೇ ಪೊಲೀಸರು ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿ ಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಳೆದ ಎರಡು ವರ್ಷಗಳ ಹಿಂದೆ ಇದೇ ಮಹಾತ್ಮಾಗಾಂಧಿಯವರ ಪ್ರತಿಮೆಯಲ್ಲಿದ್ದ ಕನ್ನಡಕವನ್ನು ದುಷ್ಕರ್ಮಿಗಳು ಕಿತ್ತು ಅವಮಾನ ಮಾಡಿದ್ದರು. ಇದನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಆಗಾಗ ಇಂತಹ ಘಟನೆಗಳು ನಡೆ ಯುತ್ತಿದ್ದು, ಪೊಲೀಸ್ ಉಪಠಾಣೆ ಯನ್ನು ಇಲ್ಲಿ ಪ್ರಾರಂಭಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮಕೈಗೊಳ್ಳಲಾಗಿತ್ತು.

ಆದರೆ ಕೆಲವು ತಿಂಗಳಿಗ ಳಿಂದ ಪೊಲೀಸ್ ಉಪಠಾಣೆ ಮುಚ್ಚಿದ್ದು, ಯಾರು ಕಾರ್ಯನಿರ್ವ ಹಿಸುತ್ತಿರಲಿಲ್ಲ. ಆದುದರಿಂದಲೇ ಮತ್ತೆ ಇಂತಹ ಘಟನೆ ಮರುಕಳಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೂಡಲೇ ಇಲ್ಲಿ ಪೊಲೀಸ್ ಉಪಠಾಣೆಯನ್ನು ಪ್ರಾರಂಭಿಸಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ವಿರೂಪಗೊಳಿಸಿ ಅವಮಾನಿಸಿದ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಘಟನಾ ಸ್ಥಳಕ್ಕೆ ಆಗಮಿಸಿದ ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. ಪ್ರಸ್ತುತ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.

ಪ್ರತಿಭಟನೆಯಲ್ಲಿ ಕಟ್ಟೆಗೆಳೆಯರ ಬಳಗದ ಗೋಪಿ, ಪರಮೇಶ್, ಸೋಮು, ಸತೀಶ್‌ಶೆಟ್ಟಿ, ನಾಗರಾಜ್, ಭಾಸ್ಕರ, ಶಂಕರ್, ರವಿಮೇಸ್ತ್ರಿ, ಪ್ರಕಾಶ್, ಗೋವಿಂದ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X