ಅನೈತಿಕ ಸಂಬಂಧ ಶಂಕೆ, ಪತ್ನಿಯನ್ನು ಹತ್ಯೆಗೈದ ಪತಿ

ರಾಮಕೃಷ್ಣಯ್ಯ ಲೇಔಟ್ 3ನೇ ಕ್ರಾಸ್ ನಿವಾಸಿ ನವ್ಯಾ(22)ಮೃತಪಟ್ಟವಳು.ಈಕೆಯ ಪತಿ ಶೇಖರ ಜ್ಞಾನಭಾರತಿ ಪೊಲೀಸ್ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.
ಹಿನ್ನೆಲೆ: ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಶೇಖರನಿಗೆ ನವ್ಯಾ ಎರಡನೇ ಹೆಂಡತಿ. ಈತನ ಮೊದಲ ಹೆಂಡತಿ ಕೆಂಗೇರಿಯಲ್ಲಿ ವಾಸ ಮಾಡುತ್ತಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ತನ್ನ ಮನೆಯ ಎದುರುಗಡೆ ವಾಸವಿದ್ದ ನವ್ಯಾಳನ್ನು ಪ್ರೀತಿಸಿ ಮದುವೆಯಾಗಿದ್ದ.
ಈಕೆಗೆ ಒಂದು ಗಂಡು ಮಗುವನ್ನು ದಯಪಾಲಿಸಿದ್ದ.ಕಳೆದ ಕೆಲ ತಿಂಗಳಿನಿಂದ ಶೇಖರ ಮತ್ತು ನವ್ಯಾಳ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸರಗೊಂಡು ಆಕೆ ತನ್ನ ತಾಯಿಯ ಮನೆಗೆ ಬಂದಿದ್ದಳು.
ಮಂಗಳವಾರ ಮಧ್ಯಾಹ್ನ ಅತ್ತೆ ಮನೆಗೆ ಹೋಗಿದ್ದ ನವ್ಯಳನ್ನು ಶೇಖರಮನೆಗೆ ಕರೆದುಕೊಂಡು ಬಂದಿದ್ದಾನೆ. ನಂತರ ಇಬ್ಬರ ನಡುವೆ ಜಗಳವಾಗಿದೆ. ಕಾಯಿತುರಿ ಮಣೆಯಿಂದ ಕತ್ತು ಕೊಯ್ದು ಆಕೆಯನ್ನು ಕೊಲೆ ಮಾಡಿ ನಂತರ ನೇರವಾಗಿ ಕಾಯಿತುರಿಯುವ ಮಣೆ ಹಿಡಿದುಕೊಂಡೇ ಜ್ಞಾನಭಾರತಿ ಪೊಲೀಸರಿಗೆ ಶರಣಾಗಿದ್ದಾನೆ.
ಪೊಲೀಸರ ಹೇಳಿಕೆ: ಕೊಲೆ ಮಾಡಿ ಠಾಣೆಗೆ ಬಂದ ಶೇಖರನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ಆತ ತನ್ನ ಪತ್ನಿ ಬೇರೊಬ್ಬರ ಜೊತೆ ಮಾತನಾಡುವುದು, ಸುತ್ತಾಡುವುದು ಮಾಡುತ್ತಿದ್ದಳು. ಈ ಬಗ್ಗೆ ಸಾಕಷ್ಟು ಬಾರಿ ತಿಳಿ ಹೇಳಿದರೂ ತನ್ನ ಮಾತು ಕೇಳಿರಲಿಲ್ಲ. ಇದರಿಂದ ಕೋಪಗೊಂಡು ಆಕೆಯನ್ನು ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆಂದು ಇನ್ಸ್‌ಪೆಕ್ಟರ್ ಚಿದಾನಂದಸ್ವಾಮಿ ತಿಳಿಸಿದ್ದಾರೆ.











Click it and Unblock the Notifications