ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ : ಹೊಟ್ಟೆಗೆ ಹೊಡೆದ ಮುಸ್ಲಿಂ ಮೌಲ್ವಿಗಳು

By Mrutyunjaya Kalmat
|
Google Oneindia Kannada News

Burqa
ದುಬೈ, ಜು. 27 : ದಕ್ಷಿಣ ಕನ್ನಡ ಮತ್ತು ಕೇರಳದ ಬಹುಭಾಗದ ಜನರ ನಿದ್ದೆಗೆಡಿಸುವ ನಿರ್ಧಾರವನ್ನು ಸೌದಿ ಅರೇಬಿಯಾದ ಮುಸ್ಲಿಂ ಮೌಲ್ವಿಗಳು ತೆಗೆದುಕೊಂಡಿದ್ದಾರೆ. ಸೌದಿಯಲ್ಲಿ ಮನೆಗೆಲಸಕ್ಕೆ ಮುಸ್ಲಿಂ ಮಹಿಳೆಯರನ್ನು ಮಾತ್ರ ನೇಮಿಸಿಕೊಳ್ಳಬೇಕು. ಹಿಂದೂ ಇಲ್ಲವೇ ಕ್ರಿಶ್ಚಿಯನ್ನರನ್ನು ನೇಮಿಸಿಕೊಳ್ಳಬಾರದು ಎಂಬ ಸಂದೇಶವನ್ನು ಮುಸ್ಲಿಂ ಮುಖಂಡರು ಹೊರಡಿಸಿದ್ದು ಇದಕ್ಕೆ ಕಾರಣವಾಗಿದೆ.

ಸೌದಿಯಲ್ಲಿ ಮುಸ್ಲಿಂ ಹೆಣ್ಣುಮಕ್ಕಳನ್ನು ಮಾತ್ರ ಮನೆಗೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ವಿದೇಶಿ ಹೆಣ್ಣುಮಕ್ಕಳನ್ನು ಮನೆಗೆಲಸಕ್ಕೆ ಸೇರಿಸಿಕೊಳ್ಳಬಹುದು. ಆದರೆ, ಅವರು ಮುಸ್ಲಿಮರಾಗಿರಬೇಕು. ಯಾವ ಕಾರಣಕ್ಕೂ ಹಿಂದೂ ಇಲ್ಲವೇ ಕ್ರಿಶ್ಚಿಯನ್ ಮಹಿಳೆಯನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳಬಾರದು ಎಂದು ಸೌದಿ ಅರೇಬಿಯಾದ ಮುಸ್ಲಿಂ ಮೌಲ್ವಿಗಳ ಮುಖಂಡ ಶೇಖ್ ಯೂಸೆಫ್ ಆಲ್ ಅಹ್ಮದ್ ಹೇಳಿದ್ದಾರೆ ಎಂದು sabq.org ವೆಬ್ ಸೈಟ್ ವರದಿ ಮಾಡಿದೆ.

ಮನೆಗೆಲಸಕ್ಕೆ ಸೇರುವ ವಿದೇಶಿ ಮಹಿಳೆಯರು ಸೌದಿ ಅರೇಬಿಯಾದ ಮುಖ್ಯವಾಗಿ ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಕಾನೂನು ಕಟ್ಟಳೆಯ ಮಿತಿಯೊಳಗೆ ಮನೆಗೆಲಸ ಮಾಡಿಕೊಂಡು ಇರಬೇಕು. ಇದರ ಜೊತೆಗೆ ಮನೆಗೆಲಸಕ್ಕೆ ಸೇರುವ ಮಹಿಳೆಯರು ತಮ್ಮ ರಕ್ಷಣೆಗೆ ಗಂಡ ಅಥವಾ ಪೋಷಕರು ಇರುವುದು ಅವಶ್ಯಕ ಎಂದು ಅಹ್ಮದ್ ಹೇಳಿದ್ದಾರೆ.

ಸೌದಿಯಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುತ್ತಿರುವ ಕನ್ನಡಿಗರು ಮತ್ತು ಮಲೆಯಾಳಿಗಳಿಗೆ ಮೌಲ್ವಿಗಳು ತೆಗೆದುಕೊಂಡಿರುವ ನಿಲುವು ಚಿಂತೆಗೀಡು ಮಾಡಿದೆ. ದಕ್ಷಿಣ ಕನ್ನಡದಿಂದ ಸಾವಿರಾರು ಕನ್ನಡಿಗರು ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಸೌದಿಗೆ ತೆರಳಿದ್ದಾರೆ. ಮಹಿಳೆಯರಿಗಿಂತ ಪುರುಷರೆ ಹೆಚ್ಚಾಗಿ ಮನೆಗೆಲಸ ಮಾಡುತ್ತಿದ್ದಾರೆ. ಜೊತೆಗೆ ಕೇರಳದ ಬಹುಭಾಗದ ಜನ ನಂಬಿರುವುದು ಈ ತೈಲ ರಾಷ್ಟ್ರವನ್ನ.

ಕೇರಳದಲ್ಲಿ ಪ್ರತಿ ಮನೆಗೂ ಒಬ್ಬರಂತೆ ಸೌದಿಯಲ್ಲಿ ಕೆಲಸ ಮಾಡಿ ಮರಳಿ ಬಂದವರೆ, ವಿದ್ಯಾಭ್ಯಾಸ ಕಡಿಮೆಯಿದ್ದರೂ ಪರವಾಗಿಲ್ಲ. ಸೌದಿಯಲ್ಲಿ ಕೆಲಸ ಸಿಗಲಿದೆ ಎಂಬ ಮಾತಿದೆ. ಇದೀಗ ಮನೆಗೆಲಸದವರ ತುತ್ತಿಗೆ ಕೈಹಾಕಿರುವ ಮೌಲ್ವಿಗಳು, ನಾಳೆಗೆ ಸೌದಿಯಲ್ಲಿ ಮುಸ್ಲಿಮರಿಗೆ ಮಾತ್ರ ಉದ್ಯೋಗ, ಹಿಂದೂ, ಕ್ರಿಶ್ಚಿಯನ್ನರಿಗೆ ಇಲ್ಲ ಎಂಬ ಸಂದೇಶವನ್ನು ರವಾನಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X