ಸೆ.7 ಕ್ಕೆ ರೇಸ್ ಕೋರ್ಸ್ ಅಂತಿಮ ಹಣಾಹಣಿ
ಬೆಂಗಳೂರು,
ಜು. 24 : ಬೆಂಗಳೂರು ಟರ್ಫ್ ಕ್ಲಬ್ ನ್ನು (ಬಿಟಿಸಿ) ರೇಸ್ ಕೋರ್ಸ್ ರಸ್ತೆಯಿಂದ ನಗರದ ಹೊರವಲಯದ ದೊಡ್ಡಜಾಲಕ್ಕೆ ಸ್ಥಳಾಂತರಿಸುವ ವಿವಾದದ ಅಂತಿಮ ವಾದವನ್ನು ಸೆಪ್ಟೆಂಬರ್ 7ಕ್ಕೆ ಮಂಡಿಸಬೇಕು ಎಂದು ಸುಪ್ರಿಂಕೋರ್ಟ್ ಸೂಚಿಸಿದೆ. id="toptextpromo">ಈ
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನ್ಯಾ. ದಲ್ವೀರ್ ಸಿಂಗ್ ಭಂಡಾರಿ ಮತ್ತುಪ ನ್ಯಾ. ದೀಪಕ್ ವರ್ಮಾ ಅವರನ್ನು ಒಳಗೊಂಡ ನ್ಯಾಯಪೀಠವು ರಾಜ್ಯಸರಕಾರಕ್ಕೆ ಸೂಚಿಸಿದೆ. ಸೆಪ್ಟೆಂಬರ್ 22ರ ಒಳಗಾಗಿ ಬಿಟಿಸಿಯನ್ನು ದೊಡ್ಡಜಾಲಕ್ಕೆ ಸ್ಥಳಾಂತರಿಸಬೇಕು ಎಂಬ ರಾಜ್ಯ ಸರಕಾರದ ಆದೇಶವನ್ನು ಎತ್ತಿಹಿಡಿದಿರುವ ಸುಪ್ರಿಂಕೋರ್ಟ್ ಹೈಕೋರ್ಟ್ ಆದೇಶವನ್ನು ಬಿಟಿಸಿ ಮತ್ತು ಬಿಟಿಸಿ ನೌಕರರ ಸಂಘವು ಪ್ರಶ್ನಿಸಿ ಸುಪ್ರಿಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. id='are-slot-1' class='oiad oi-axt oiadv'> id='top-searched-articles'>ಕಳೆದ
145 ವರ್ಷಗಳಿಂದ ರೇಸ್ ಕೋರ್ಸ್ ರಸ್ತೆಯ ಪಕ್ಕದಲ್ಲಿರುವ ಜಾಗದಲ್ಲಿ ಕುದುರೆ ರೇಸ್ ನಡೆಸಿಕೊಂಡು ಬರಲಾಗುತ್ತಿದೆ. ಈ ಜಾಗವನ್ನು ಮೈಸೂರಿನ ಮಹಾರಾಜರು ಕ್ಲಬ್ ಗೆ ಶಾಶ್ವತವಾಗಿ ನೀಡಿದ್ದು, ಕರ್ನಾಟಕ ಸರಕಾರ ಸಹ 1915ರ ಆದೇಶವನ್ನು ದೃಢೀಕರಿಸಿದೆ ಎಂಬುದು ಅರ್ಜಿದಾರರ ವಾದವಾಗಿದೆ.











Click it and Unblock the Notifications