ಬಸ್ ಹರಿದು ಐಬಿಎಂ ಉದ್ಯೋಗಿ ಸಾವು
ಬೆಂಗಳೂರು,
ಜು. 22 : ಖಾಸಗಿ ಬಸ್ ಹರಿದ ಪರಿಣಾಮ ಐಬಿಎಂ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರ್ ಸಾವನ್ನಪ್ಪಿದ ಘಟನೆ ರೆಸಿಡೆನ್ಸಿ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. id="toptextpromo">ಅಲ್ವಿನ್
ಫಿಲಿಫ್ ಮೋಹನ್ ದಾಸ್ (32) ಸಾವನ್ನಪ್ಪಿದ ನತದೃಷ್ಟ ಟೆಕ್ಕಿ. ಹೆಬ್ಬಾಳದ ನಾಗಾವರ ಹೊರವರ್ತುಲ ರಸ್ತೆಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿರುವ ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಿಷಪ್ ಕಾಟನ್ ಶಾಲೆಯಲ್ಲಿ ಎಲ್ ಕೆಜಿ ಓದುತ್ತಿರುವ ಮಗನನ್ನು ಬೆಳಗ್ಗೆ 10.15 ಸುಮಾರಿಗೆ ಶಾಲೆಗೆ ಬಿಟ್ಟ ಬಳಿಕ ಅಲ್ಲಿಂದ ಕಚೇರಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. id='are-slot-1' class='oiad oi-axt oiadv'> id='top-searched-articles'>ರೆಸಿಡೆನ್ಸಿ
ರಸ್ತೆಯಲ್ಲಿರುವ ಬಜಾಜ್ ಎಲೆಕ್ಟ್ರಿಕಲ್ ಕಚೇರಿ ಬಳಿ ಏಕಾಏಕಿ ಕಾರು ನಿಲ್ಲಿಸಿದ ವ್ಯಕ್ತಿಯೊಬ್ಬ ಬಲಭಾಗದಿಂದ ವಾಹನದ ಬಾಗಿಲು ತೆಗೆದಾಗ ಅದು ಅಲ್ವಿನ್ ಅವರ ಬೈಕ್ ಗೆ ತಗುಲಿತು. ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದ ಅವರ ಮೇಲೆ ಖಾಸಗಿ ಬಸ್ ಹರಿದಿದ್ದರಿಂದ ಅವರ ತೀವ್ರವಾಗಿ ಗಾಯಗೊಂಡರು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅವರ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications