ನೀವ್ಯಾಕೆ ರೆಡ್ಡಿಗಳನ್ನು ಬೆಂಬಲಿಸುತ್ತಿಲ್ಲ : ಸುಷ್ಮಾ
ನವದೆಹಲಿ,
ಜು. 19 : ರೆಡ್ಡಿಗಳನ್ನು ಸಚಿವ ಸಂಪುಟದಿಂದ ಕೈಬಿಡುವಂತಿಲ್ಲ. ಇಂದಿನ ಸನ್ನಿವೇಶದಲ್ಲಿ ಬಿಜೆಪಿ ಹೋರಾಟ ಮಾಡಬೇಕಿರುವುದು ಕಾಂಗ್ರೆಸ್ ವಿರುದ್ಧವೇ ಹೊರತು ರೆಡ್ಡಿಗಳ ವಿರುದ್ಧವಲ್ಲ. ನಿಮಗೆ ಅವರು ಅಷ್ಟೂಂದು ಸಹಾಯ ಮಾಡಿದ್ದಾರೆ. ಆದರೆ, ನೀವು ಅವರಿಗೆ ನೆರವು ನೀಡುತ್ತಿಲ್ಲ ಏಕೆ ಎಂದು ನೇರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರಶ್ನೆ ಹಾಕಿದವರು ರೆಡ್ಡಿಗಳ ತಾಯಿ ಸುಷ್ಮಾ ಸ್ವರಾಜ್ ಅವರು. id="toptextpromo">ತಮ್ಮ
ಮಮತೆಯ ಅಮ್ಮನನ್ನು ಸುಖದುಖಃ ಹಂಚಿಕೊಂಡ ರೆಡ್ಡಿ ಸಹೋದರರು ನಂತರ ಕರ್ನಾಟಕಕ್ಕೆ ಬಂದು ಮುಖ್ಯಮಂತ್ರಿಯೊಂದಿಗೆ ಉಪಹಾರ ಸೇವಿಸಿದರು. ಎನ್ ಡಿಎ ಸರಕಾರದಲ್ಲಿ ಶವಪಟ್ಟಿಗೆ ಹಗರಣದ ಅಪಾದನೆ ಎದುರಿಸಿದ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಹಂಗಾಮಿಯಾಗಿ ಕೆಲ ಕಾಲ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ವಾಪಸ್ಸಾದ ಪ್ರಕಾರ ತಮ್ಮ ಪೈಕಿ ಒಬ್ಬರು ರಾಜೀನಾಮೆ ನೀಡುವ ಪ್ರಸಂಗ ಬಂದರೆ ರಕ್ಷಣೆ ನೀಡಬೇಕು ಎಂಬುದಾಗಿ ರೆಡ್ಡಿ ಸಹೋದರರು ಮುಖ್ಯಮಂತ್ರಿಯವರು ಕೋರಿದರು ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ತಾವುಗಳು
ಯಾವುದೇ ತನಿಖೆಗೂ ಹೆದರುವುದಿಲ್ಲ. ಕಾಂಗ್ರೆಸ್ಸಿಗರ ಆರೋಪಗಳನ್ನು ಸವಾಲಿನಂತೆ ಸ್ವೀಕರಿಸುವುದಾಗಿ ರೆಡ್ಡಿ ಹೇಳಿದರು. ಕಾಂಗ್ರೆಸ್ ಬಂಡವಾಳವನ್ನು ಬಯಲಿಗೆಳೆಯಲು ಬೆಂಗಳೂರಿನಲ್ಲಿ ಐತಿಹಾಸಿಕ ಎನ್ನಬಹುದಾದ ಪತ್ರಿಕಾಗೋಷ್ಠಿಯನ್ನು ನಡೆಸುವುದಾಗಿಯೂ ಅವರು ಹೇಳಿದರು. ಮುಖ್ಯಮಂತ್ರಿ ಯಡಿಯೂರಪ್ಪ ನವದೆಹಲಿ ಭೇಟಿ ನೀಡಿದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರೊಂದಿಗೆ ನಡೆದ ಸಂಭಾಷಣೆ ಇದು.











Click it and Unblock the Notifications