ಕಡೂರು ಶಾಸಕ ಕೃಷ್ಣಮೂರ್ತಿ ನಿಧನ
ಬೆಂಗಳೂರು,
ಜು.18 : ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ಎಂ ಕೃಷ್ಣಮೂರ್ತಿ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಇವರಿಗೆ 62 ವರ್ಷ ವಯಸ್ಸಾಗಿತ್ತು. id="toptextpromo">ಸತತ
ನಾಲ್ಕು ಬಾರಿ ಕಡೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕೃಷ್ಣ ಮೂರ್ತಿ ಕಳೆದ ತಿಂಗಳನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. 1994, 2004ರಲ್ಲಿ ಜನತಾ ಪರಿವಾರದಿಂದ, 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಬೆಂಗಳೂರಿನ
ಬಸವೇಶ್ವರ ನಗರದ ಪೆನೇಷಿಯಾ ಆಸ್ಪತ್ರೆಯಲ್ಲಿ ಕೃಷ್ಣಮೂರ್ತಿ ಅವರನ್ನು ದಾಖಲಿಸಲಾಗಿತ್ತು. ಶನಿವಾರ ಮಧ್ಯರಾತ್ರಿ ಅವರು ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ. ಕಡೂರು ಪುರಸಭೆ ಸದಸ್ಯರಾಗುವ ಮೂಲಕ ಕೃಷ್ಣಮೂರ್ತಿ ರಾಜಕೀಯ ಪ್ರವೇಶಿಸಿದರು. 1986ರಲ್ಲಿ ಯುಗಟಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು. ನಂತರ ಜಿಪಂ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.











Click it and Unblock the Notifications