ರೆಡ್ಡಿಗಳ ಬೆನ್ನಿಗೆ ಬರೀ 10 ಶಾಸಕರು

ಅಕ್ರಮ ಗಣಿಗಾರಿಕೆಯ ಆರೋಪಗಳು ರಾಷ್ಟ್ರಮಟ್ಟದಲ್ಲಿ ಪಕ್ಷದ ವರ್ಚಸ್ಸಿಗೆ ಮಸಿ ಬಳಿಯುತ್ತಿರುವ ಕುರಿತು ಚಿಂತೆಯನ್ನು ವ್ಯಕ್ತಪಡಿಸಿರುವ ಅಡ್ವಾಣಿ, ರೆಡ್ಡಿ ಸಹೊದರರೊಂದಿಗೆ ಮಾತಾಡಿ ಬುದ್ಧಿವಾದ ಹೇಳುವಂತೆ ಅಧ್ಯಕ್ಷ ನಿತಿನ್ ಗಡ್ಕರಿ, ಅರುಣ್ ಜೈಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಸಿಎಂ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಸುರೇಶ್ ಕುಮಾರ್, ಆಚಾರ್ಯ ಜೊತೆ ಅಡ್ವಾಣಿ ಅವರನ್ನು ಭೇಟಿ ಮಾಡಿದಾಗ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಮತ್ತು ಸಂಸದ ಅನಂತ್ ಕುಮಾರ್ ಕೂಡಾ ಇದ್ದರು.
ಒಂದು ವೇಳೆ ರೆಡ್ಡಿಗಳ ವಿರುದ್ಧ ಕ್ರಮ ಕೈಗೊಂಡರೆ ಸರಕಾರವನ್ನು ಉಳಿಸಿಕೊಳ್ಳುವ ವಿಶ್ವಾಸ ನಿಮಗೆ ಉಂಟೇ ಎಂಬ ಅಡ್ವಾಣಿ ಪ್ರಶ್ನೆಗೆ, ಸರಕಾರಕ್ಕೆ ಯಾವುದೇ ಅಪಾಯವಿಲ್ಲ. ರೆಡ್ಡಿಗಳ ಜೊತೆ ನಿಲ್ಲುವ ಶಾಸಕರ ಸಂಖ್ಯೆ ಹತ್ತರೊಳಗೆ ಮಾತ್ರ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಈಶ್ವರಪ್ಪ ಮಾತ್ರ ಇದನ್ನು ಅಲ್ಲಗಳೆದಿದ್ದು, ರೆಡ್ಡಿಗಳ ಮೇಲೆ ಕ್ರಮ ಕೈಗೊಂಡರೆ ಸರಕಾರ ಉಳಿಯುವುದು ಕಷ್ಟ ಎಂದು ಹೇಳಿದ್ದಾರೆ.
ರೆಡ್ಡಿಗಳಿಗೆ ಶಿಕ್ಷೆ ಆಗಲಿ
ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರ ತನಿಖೆ ನಡೆದು ರೆಡ್ಡಿಗಳು ನಿಜವಾಗಿಯೂ ತಪ್ಪಿತಸ್ಥರೇ ಆಗಿದ್ದಲ್ಲಿ ಅವರಿಗೆ ಶಿಕ್ಷೆ ಆಗಲಿ ಎಂದು ರೆಡ್ಡಿಗಳ ಪ್ರೀತಿಯ ಅಮ್ಮ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರ ಮಧ್ಯಂತರ ವರದಿಯಲ್ಲಿ ರೆಡ್ಡಿಗಳ ಹೆಸರಿಲ್ಲ. ಅಪಾದನೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸುಷ್ಮಾ ಹೇಳಿದ್ದಾರೆ.












Click it and Unblock the Notifications