ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬೌಲೆ' ಎಂದರೆ ಏನು ಗೊತ್ತೇ?

By Prasad
|
Google Oneindia Kannada News

Boule sperm gene (pic courtesy : discovery)
ಸಕಲ ಪ್ರಾಣಿಪ್ರಪಂಚದಲ್ಲಿ ಸಂತಾನೋತ್ಪತ್ತಿಯಲ್ಲಿ ವೀರ್ಯಾಣುಗಳ ಪಾತ್ರ ಎಷ್ಟು ಮುಖ್ಯ ಎಂಬುದು ನಿಮಗೂ ತಿಳಿದೇ ಇದೆ. ಗಂಡಿನಿಂದ ವೀರ್ಯ ಹಾಗೂ ಹೆಣ್ಣಿನಿಂದ ಅಂಡಗಳು ಒಂದು ಪಕ್ವವಾದ ಸಮಯದಲ್ಲಿ ಬೆರೆತು ನಂತರ ಅದು ಮತ್ತೊಂದು ಜೀವಿಯಾಗಿ ಜನ್ಮ ತಳೆಯುತ್ತವೆ. ಇಲ್ಲಿ ಗಂಡಿನ ಕೊಡುಗೆ ವೀರ್ಯಾಣು. ಇಂತಹ ವೀರ್ಯಾಣುಗಳ ಉತ್ಪತ್ತಿಯಾಗಲು ಅತ್ಯವಶ್ಯಕವಾಗಿ ಬೇಕೇ ಬೇಕಾದ ಒಂದು ವಂಶವಾಹಿ(ಜೀನ್)ಯ ಹೆಸರು "ಬೌಲೆ".

ಭೂಮಿಯ ಮೇಲೆ ಪ್ರಾಣಿಗಳ ಉಗಮದ ಆದಿಯಿಂದ, ಅಂದರೆ ಸುಮಾರು 600 ಮಿಲಿಯನ್ ವರ್ಷಗಳಿಂದ, ಜೀವ ವಿಕಾಸ ಹೇಗೆ ಸಾಗಿದೆ ಎಂಬುದನ್ನು ನಾವೆಲ್ಲಾ ಓದಿದ್ದೇವೆ. ಇದೀಗ ಕೆಲವು ವಿಜ್ಞಾನಿಗಳ ತಂಡವೊಂದು ನಡೆಸಿರುವ ಸಂಶೋಧನೆ ಏನು ಹೇಳುತ್ತಿದೆ ಎಂದರೆ, ಸಕಲ ಪ್ರಾಣಿಪ್ರಪಂಚದಲ್ಲಿ ವೀರ್ಯೋತ್ಪತ್ತಿಗೆ ಕಾರಣವಾಗುವ ವಂಶವಾಹಿ "ಬೌಲೆ". ಈ 600 ಮಿಲಿಯನ್‌ ವರ್ಷಗಳಲ್ಲಿ, ಯಾವುದೇ ಮಾರ್ಪಾಡಿಗೆ ಒಳಗಾಗದೇ, ತನ್ನ ಮೂಲ ರೂಪವನ್ನೇ ಕಾಯ್ದುಕೊಂಡಿದೆ. ಈ ವಂಶವಾಹಿಯು ಎಲ್ಲಾ ಪ್ರಾಣಿಗಳಲ್ಲೂ ಕಂಡು ಬರುತ್ತದೆ. ಒಂದು ಅತೀ ಸಣ್ಣ ಕೀಟದಿಂದ ಹಿಡಿದು, ದೊಡ್ಡ ಪ್ರಾಣಿಗಳಾದ ಆನೆಗಳಲ್ಲಿಯೂ ಸಹ, ಇದೇ ವಂಶವಾಹಿ ಇರುತ್ತದೆ. ಹಾಗೂ ಎಲ್ಲಾ ಪ್ರಾಣಿಗಳಲ್ಲೂ ವೀರ್ಯೋತ್ಪತ್ತಿಯಲ್ಲಿ ಸಮಾನ ಪ್ರಮುಖ ಪಾತ್ರವಹಿಸುತ್ತದೆ.

ಇದಿಷ್ಟು ಸಂಶೋದನೆಯ ಒಂದು ಮಗ್ಗಲು. ಈ ಪ್ರಯೋಗದಿಂದ ಈಗ ನಮಗೆ ಆಗಬಹುದಾದ ಅನುಕೂಲಗಳೇನಿರಬಹುದು? ನೋಡೋಣ...

1. ಗಂಡಸರಿಗೆ ಸಂತಾನೋತ್ಪತ್ತಿಯನ್ನು ತಡೆಯಬಲ್ಲ ಮಾತ್ರೆಗಳನ್ನು ಕಂಡುಕೊಳ್ಳಬಹುದು.

2. ಹಾನಿಕಾರಕ ಕೀಟಗಳ ಸಂತಾನೋತ್ಪತ್ತಿಯನ್ನು ಹಿಡಿತಕ್ಕೆ ತರಬಹುದು.

3. ರೋಗಗಳನ್ನು ಹರಡುವ ಕೀಟಗಳನ್ನು ನಾಶಪಡಿಸಬಹುದು.

ಇನ್ನೂ ಏನೆಲ್ಲಾ ಸಾದ್ಯತೆಗಳಿವೆ? ಎಂದು ನಿಮಗನ್ನಿಸಿದ್ದನ್ನು ಹಂಚಿಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X