ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಡಿಗೆ ತಾಯ್ತನ: ಅನುಮತಿ ಇನ್ಮುಂದೆ ಕಡ್ಡಾಯ

By Mahesh
|
Google Oneindia Kannada News

Foreign nationals need to consult consulates on surrogacy
ರೋಮ್/ಮುಂಬೈ, ಜು.16: ರೊನಾಲ್ಡೋಗೆ ಮಗುವಾಯ್ತಂತೆ ತಾಯಿ ಯಾರು ಗೊತ್ತಿಲ್ಲ ಎಂಬ ಸುದ್ದಿಗೆ ಉತ್ತರ ಸಿಕ್ಕಿ ಬಾಡಿಗೆ ಅಮೆರಿಕನ್ ತಾಯಿ ಮಗು ಪಡೆದಿದ್ದ್ದು ತಿಳಿದು ಬಂದಿದೆ. ಅದೇ ಕೆಲಸವನ್ನು ರೊನೊಲ್ಡೊ ಪೋರ್ಚುಗಲ್ ನಲ್ಲಿ ಮಾಡಿದ್ದರೆ ತುಸು ಕಷ್ಟವಾಗುತ್ತಿತ್ತು. ಕಾರಣ, ಯುರೋಪ್ ನ ಪ್ರಮುಖ ರಾಷ್ಟ್ರಗಳು ಬಾಡಿಗೆ ತಾಯ್ತನಕ್ಕೆ ವಿರುದ್ಧವಾಗಿ ನಿಂತಿವೆ.

ಬಾಡಿಗೆ ತಾಯ್ತನ ಬಳಸಿ ಜನಿಸಿದ ಮಗುವಿನ ಪೌರತ್ವ ವಿಷಯ ಬಗೆಹರಿಸುವಲ್ಲಿ ಸಮಸ್ಯೆಗಳು ತಲೆದೋರುತ್ತಿದೆ. ಹೀಗಾಗಿ ಬಾಡಿಗೆ ತಾಯ್ತನ ಬಯಸುವ ನಾಗರೀಕರುಗಳಿಗೆ ಕೃತಕ ಗರ್ಭಧಾರಣೆ ಕ್ಲಿನಿಕ್‌ ಗಳು ಯಾವುದೇ ನೆರವು ನೀಡಬಾರದು ಎಂದು ಯುರೋಪಿನ ಮಹಾನಗರಗಳ ಆಡಳಿತ ತಾಕೀತು ಮಾಡಿದೆ.

ಹಾಗೇನಾದರೂ ಚಿಕಿತ್ಸೆ ಅವಶ್ಯವಿದ್ದರೆ ಚಿಕಿತ್ಸೆಗೂ ಮುನ್ನ ದೂತಾವಾಸ ಕಚೇರಿಗೆ ಮಾಹಿತಿ ಒದಗಿಸುವಂತೆ ವಿದೇಶಿ ಪ್ರಜೆಗಳಿಗೆ ಎಂಟು ರಾಷ್ಟ್ರಗಳು ನಿರ್ದೇಶಿಸಿರುವುದನ್ನು ಕೃತಕ ಸಂತಾನೋತ್ಪತ್ತಿ ಕೇಂದ್ರಗಳು ಸ್ವಾಗತಿಸಿವೆ. ಬಾಡಿಗೆ ತಾಯಿ ಎಂದರೆ ಮಹಿಳೆ ಯೊಬ್ಬಳು ಕೃತಕ ಗರ್ಭಧಾರಣೆ ಮೂಲಕ ಯಾವುದೇ ವ್ಯಕ್ತಿ ಅಥವಾ ದಂಪತಿಗಾಗಿ ಮಗುವನ್ನು ಹೆತ್ತುಕೊಡುವುದು.

ಇದೇ ನೀತಿ ಭಾರತಕ್ಕೂ ಅನ್ವಯ : ಭಾರತದಲ್ಲಿ ಇಂತಹ ಬಾಡಿಗೆ ತಾಯ್ತನ ಮಾರುಕಟ್ಟೆಯು 1,000 ದಿಂದ 5,000 ಕೋಟಿ ರು. ವಹಿವಾಟು ಕಾಣುತ್ತಿದೆ.

ಜರ್ಮನಿ, ಫ್ರಾನ್ಸ್, ಪೋಲೆಂಡ್, ಜೆಕ್ ಗಣರಾಜ್ಯ, ಇಟಲಿ, ನೆದರ್‌ಲೆಂಡ್, ಬೆಲ್ಜಿಯಂ ಮತ್ತು ಸ್ಪೇನ್ ರಾಷ್ಟ್ರಗಳ ದೂತಾವಾಸ ನಿರ್ದೇಶನಾಲಯಗಳು ಮುಂಬಯಿಯಲ್ಲಿ 10 ಕ್ಕೂ ಹೆಚ್ಚು ಗರ್ಭಧಾರಣೆ ಕ್ಲಿನಿಕ್‌ಗಳನ್ನು ಗುರುತಿಸಿದ್ದು, ತನ್ನ ನಾಗರಿಕರಿಗೆ ಬಾಡಿಗೆ ತಾಯ್ತನ ನೆರವು ನೀಡದಂತೆ ಸೂಚಿಸಿದೆ' ಎಂದು ಗರ್ಭಧಾರಣೆಯೊಂದರ ವೈದ್ಯರು ತಿಳಿಸಿದ್ದಾರೆ.

ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ತಾಯ್ತನ ಒಪ್ಪಂದ ಮೇಲಿನ ರಾಷ್ಟ್ರಗಳಲ್ಲಿ ಕಾನೂನುಬಾಹಿರವಾಗಿದೆ. ಗಮನಾರ್ಹವೆಂದರೆ ಭಾರತದಲ್ಲಿಯೂ ಇದರ ಬಗ್ಗೆ ಯಾವುದೇ ಕಾನೂನು ಸ್ಪಷ್ಟವಾಗಿಲ್ಲ. ಆದರೆ ಇದರ ಅಗತ್ಯ ಬಹಳಷ್ಟಿದೆ ಎಂಬುದು ವೈದ್ಯಕೀಯ ಕ್ಷೇತ್ರದ ಅಭಿಪ್ರಾಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X