ಕಳಪೆ ಕಂಟ್ರಾಕ್ಟರ್ ಮುನಿ ರಾಜೀನಾಮೆಗೆ ದಿನಗಣನೆ

ಲೋಕಾಯುಕ್ತರ ವರದಿಯಲ್ಲಿ ಉಪ ಗುತ್ತಿಗೆ ದಾರ ಹ್ಯೂಮೇಶ್ ಕುಮಾರ್ ಅವರ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಇಬ್ಬರು ಇಂಜಿನಿಯರ್ ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಮೇಯರ್ ಎಸ್ ಕೆ ನಟರಾಜ್ ಹೇಳಿದರು.ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ಮುನಿರತ್ನ ಅವರ ಭವಿಷ್ಯ ನಿರ್ಧರಿಸುವುದಾಗಿ ಬಿಬಿಎಂಪಿ ಪ್ರತಿಪಕ್ಷದ ನಾಯಕ ನಾಗರಾಜ್ ಹೇಳಿದರು.
ಸಂಜನಾ ಸಿಂಗ್ ಹೆತ್ತವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ತನಿಖೆ ನಡೆಸಿತ್ತು. ಅದರ ಆಧಾರದ ಮೇಲೆ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರ ತಂಡ 52 ಪುಟಗಳ ಸುದೀರ್ಘ ವರದಿ ತಯಾರಿಸಿದ್ದು, ಬಿಬಿಎಂಪಿ ಮೇಯರ್ ಹಾಗೂ ಸರಕಾರಕ್ಕೆ ವರದಿ ಪ್ರತಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ತಾನು ತಪ್ಪಿತಸ್ಥ ಎಂದು ಸಾಬೀತಾದರೆ ಮೃತ ಸಂಜನಾ ಸಿಂಗ್ ಅವರ ಕುಟುಂಬಕ್ಕೆ ಒಂದು ಕೋಟಿ ರು ಪರಿಹಾರ ನೀಡುವೆ ಹಾಗೂ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವೆ ಎಂದು ಮುನಿರತ್ನ ಘೋಷಿಸಿದ್ದರು. ಸಂಜನಾಸಿಂಗ್ ಕುಟುಂಬಕ್ಕೆ ಈಗಾಗಲೇ ಪ್ರಾಥಮಿಕ ಪರಿಹಾರವಾಗಿ ಒಂದು ಲಕ್ಷ ರುಗಳನ್ನು ಬಿಬಿಎಂಪಿ ನೀಡಿದೆ. ಆದರೆ, ಲೋಕಾಯುಕ್ತ ವರದಿ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸುವುದಾಗಿ ಮೇಯರ್ ನಟರಾಜ್ ಹೇಳಿದರು.












Click it and Unblock the Notifications