ತಾಕತ್ತಿದ್ದರೆ ಸಿಗಂದೂರಮ್ಮನ ಮೇಲೆ ಆಣೆ ಮಾಡ್ಲಿ ;ಹಾಲಪ್ಪ

ಅತ್ಯಾಚಾರ ಆರೋಪಕ್ಕೆ ಒಳಗಾಗಿರುವ ಹಾಲಪ್ಪ ಸೋಮವಾರ ಸ್ವಕ್ಷೇತ್ರ ಸೊರಬಕ್ಕೆ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮಾಜಿ ಮುಖ್ಯಮಂತ್ರಿಯೊಬ್ಬರು ನನ್ನ ಏಳಿಗೆ ಸಹಿಸದೆ ರಾಜಕೀಯ ಹತ್ಯೆಗೆ ಷಡ್ಯಂತ್ರ ನಡೆಸಿದ್ದಾರೆ.
ರಾಜೀವ್ ಹತ್ಯೆ ಮಾಡಿದ ಎಲ್‌ಟಿಟಿಇ ಇಂದು ನಾಮಾವಶೇಷವಾಗಿದೆ. ಯಹೂದಿಗಳ ಹತ್ಯೆ ಮಾಡಿ ದ ಹಿಟ್ಲರ್ ಸರ್ವನಾಶವಾದ. ಅದೇ ರೀತಿ ನನ್ನ ಮುಗಿಸಲು ಹೊರಟವರಿಗೆ ಜನರೇ ಪಾಠ ಕಲಿಸುತ್ತಾ ರೆ ಎಂದು ಬಂಗಾರಪ್ಪ ಕುಟುಂಬದ ವಿರುದ್ದ ವಾಗ್ದಾಳಿ ನಡೆಸಿದರು.
ವಿಧಾನಸಭೆ, ಲೋಕಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಪಂಚಾಯಿತಿ ಚುನಾವಣೆಯಲ್ಲಾದರೂ ಗೆಲ್ಲಬೇಕೆಂಬ ಹಠದಿಂದ ನನ್ನ ವಿರುದಟಛಿ ಆರೋಪ ಮಾಡಿದ್ದಾರೆ. ಅದೂ ಸರ್ಕಾರಿ ರಜೆಯ ದಿನ ನೋಡಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುವ ಮುನ್ನವೇ ಮಾಧ್ಯಮವೊಂದಕ್ಕೆ ವಿಷಯ ತಿಳಿದಿದ್ದಾದರೂ ಹೇಗೆ? ಎಂದು ಹಾಲಪ್ಪ ಪ್ರಶ್ನಿಸಿದರು.
ಇದಕ್ಕೂ ಮುನ್ನ ಹಾಲುಂಡ ತವರಿಗೆ ಮರಳಿದ ಹಾಲಪ್ಪ ಕೊಂಚ ಗರಂ ಆಗಿದ್ದರು. ಅಭಿಮಾನಿಗಳು ಜಯ ಘೋಷ ಕೂಗುತ್ತಾ ಹಾಕಿದ ಹಾರ, ತುರಾಯಿಯನ್ನು ಕಿತ್ತೊಗೆದು ಯಾವನಿಗೆ ಬೇಕು ಹಾರ ಹೋಗೊ ಎಂದು ಅಭಿಮಾನಿಯ ಕೊರಳಿಗೆ ಹಾರವನ್ನು ವಾಪಾಸ್ ಮಾಡಿಬಿಟ್ಟರು.












Click it and Unblock the Notifications