ಐಪಾಡ್ ಸಂಗೀತ ಕೇಳುತ್ತಾ ಟ್ರೈನ್ ಅಡಿಗೆ ಸಿಕ್ಕಿ ಸಾವು

Old man run over by train while listening to music
ಬೆಂಗಳೂರು, ಜು.13: ಹಲವರಿಗೆ ಕಿವಿಯಲ್ಲಿ ಐಪಾಡ್ ಸಂಗೀತ ಹಾಡುತ್ತಿದ್ದರೆ ಸುತ್ತಮುತ್ತಲಿನ ಅರಿವೇ ಇರುವುದಿಲ್ಲ. ನಗರದ ವಯೋವೃದ್ಧರೊಬ್ಬರು ನಿತ್ಯದ ವಾಕಿಂಗ್ ಮುಗಿಸಿಕೊಂಡು ನೆಚ್ಚಿನ ಹಾಡು ಕೇಳುತ್ತಾ, ರೈಲ್ವೇ ಟ್ರಾಕ್ ದಾಟುವಾಗ, ಎದುರಿಗೆ ಬರುತ್ತಿದ್ದ ಟ್ರೈನ್ ಸದ್ದು ಕೇಳಿಸಲಿಲ್ಲ. ಕೇಳಿಸಿದ್ದುಮಾತ್ರ ಯಮಪುರಿಯ ಕರೆ.

ಸಂಗೀತ ಕೇಳುವ ಹುಚ್ಚಿಗೆ ಯಶವಂತಪುರ- ಕಣ್ಣಾನೂರು ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಚೆನ್ನೈ ದೂರದರ್ಶನ ಕೇಂದ್ರದ ನಿವೃತ್ತ ಸಹಾಯಕ ನಿರ್ದೇಶಕ ವ್ಯಾಸರಾಜನ್ (69) ಬೆಳಗ್ಗೆ 7 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.

ಯಶವಂತಪುರ ಗೋಕುಲ ರೈಲ್ವೆ ಗೇಟ್‌ವೇ ಸಮೀಪದ ದಿವ್ಯಾ ಎಂಎಸ್‌ಆರ್ ಅಪಾರ್ಟ್ ಮೆಂಟ್‌ನಲ್ಲಿ ಹನ್ನೊಂದು ವರ್ಷದಿಂದ ನೆಲೆಸಿದ್ದರು. ಇವರ ಪತ್ನಿ ಹತ್ತು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಮಗಳು ಸುಧಾ ದಿಲ್ಲಿಯಲ್ಲಿ ನೆಲೆಸಿದ್ದು, ಪುತ್ರ ಪ್ರಸನ್ನ ನಗರದ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿ.

ಪ್ರತಿ ದಿನ ಬೆಳಗ್ಗೆ 5.30 ಕ್ಕೆ ವ್ಯಾಸರಾಜನ್ ಸ್ನೇಹಿತರ ಜತೆ ಜೆಪಿ ಪಾರ್ಕ್‌ಗೆ ವಾಯುವಿಹಾರಕ್ಕೆ ತೆರಳುತ್ತಿದ್ದರು. ವಾಕಿಂಗ್ ಮುಗಿಸಿಕೊಂಡು 7.30ರ ಸುಮಾರಿಗೆ ವಾಪಸ್ ಆಗುವುದು ವಾಡಿಕೆ. ವಾಕಿಂಗ್ ಹೋಗುವಾಗ ಕಿವಿಗೆ ಐಪಾಡ್ ಹಾಕಿಕೊಂಡೇ ಹೋಗುತ್ತಿದ್ದರು.

ಆದರೆ, ಯಶವಂತಪುರ ರೈಲು ನಿಲ್ದಾಣದಲ್ಲಿ ಎರಡು ಟ್ರ್ಯಾಕ್‌ಗಳಿವೆ. ಏಕಕಾಲದಲ್ಲಿ ಎರಡು ರೈಲು ಪಾಸಾಗುವುದಕ್ಕೆ ಅವಕಾಶವಿದೆ. ಜೆಪಿ ಪಾರ್ಕ್‌ನಿಂದ ಮನೆಗೆ ವಾಪಸ್ ಆಗುವಾಗ ಮೊದಲನೇ ಟ್ರ್ಯಾಕ್ ದಾಟಿ ಇನ್ನೊಂದು ಟ್ರ್ಯಾಕ್‌ಗೆ ಬಂದಾಗ ಕಣ್ಣಾನೂರು ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಸ್ಥಳದಲ್ಲೇ ದುರಂತ ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+