ರಾಯಚೂರಲ್ಲಿ ಪ್ರಾಬ್ಲಂ ಆದ್ರೆ ರಾಜಧಾನಿಗೆ ಕತ್ತಲೆ

ರಾಯಚೂರು ಘಟಕ ನಿರ್ವಾಹಣಾ ವಿಭಾಗದ ದೋಷದಿಂದ ಕಲ್ಲಿದ್ದಲು ಸಾಗಾಣಿಗೆ ಅಡ್ಡಿಯಾಗಿದ್ದು ಐದು ಘಟಕಗಳ ಉತ್ಪಾದನೆ ಸ್ಥಗಿತಗೊಂಡಿದೆ. ಈಗ 3 ಮತ್ತು 5ನೇ ಘಟಕ ಮಾತ್ರ ವಿದ್ಯುತ್ ಉತ್ಪಾದಿಸುತ್ತಿದ್ದು 6 ಮತ್ತು 7ನೇ ಘಟಕ ಸೋಮವಾರ (ಜು 12) ರಾತ್ರಿ ವಿದ್ಯುತ್ ಉತ್ಪಾದನೆಪುನರಾರಂಭಿಸಿದೆ.
ಆಮದು ಹಾಗೂ ಜಲ ಮೂಲದಿಂದ ನಿರೀಕ್ಷಿತ ಪ್ರಮಾಣದ ವಿದ್ಯುತ್ ದೊರೆಯದೆ ವಿದ್ಯುತ್ ಕಡಿತ ಯದ್ವಾತದ್ವ ಹೆಚ್ಚಾಗಿದ್ದು, ಪುನರಾರಂಭ ಗೊಂಡ ಘಟಕಗಳು ಕೂಡ ಪೂರ್ಣ ಸಾಮರ್ಥ್ಯದ ಅಂದರೆ 210 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಡೆಸುತ್ತಿಲ್ಲ ಬದಲಿಗೆ ಕೇವಲ 150 ಮೆಗಾ ವ್ಯಾಟ್ ಉತ್ಪಾದಿಸುತ್ತಿದೆ.
ವಿದ್ಯುತ್ ಕೇಂದ್ರದ ಅಧಿಕಾರಿಗಳು ಅಹೋರಾತ್ರಿ ಕಸರತ್ತು ನಡೆಸಿದರೂ ಸಮಸ್ಯೆಗೆ ಇನ್ನೂ ಪರಿಹಾರ ಸಿಗುತ್ತಿಲ್ಲ ಎಂದು ಮುಖ್ಯ ಇಂಜಿನಿಯರ್ ಹೇಳಿದ್ದಾರೆ. ಸದನದಲ್ಲಿ ಗಣಿ, ಬಳ್ಳಾರಿ ವಿವಾದ ಚರ್ಚೆ, ಧರಣಿಯಲ್ಲಿ ಎಲ್ಲರೂ ನಿರತರಾಗಿರುವಾಗ ಕರ್ನಾಟಕ ಕತ್ತಲೆಯಲ್ಲಿ ಮುಳುಗುತ್ತಿದೆ.












Click it and Unblock the Notifications