ಹೈಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಪಹರೆ

Security enhanced at Karnataka HC
ಬೆಂಗಳೂರು, ಜು.10: ವಕೀಲೆ ನವೀನಾ ಕೊಲೆ ಘಟನೆಯ ಬಳಿಕ ಕರ್ನಾಟಕ ಹೈಕೋರ್ಟ್ ಆವರಣದಲ್ಲಿ ಶುಕ್ರವಾರದಿಂದ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಪೊಲೀಸರು ಒಳಬರುವವರನ್ನು ತಪಾಸಣೆ ಮಾಡುತ್ತಿರುವ ದೃಶ್ಯ ಹೈಕೋರ್ಟ್ ಆವರಣದಲ್ಲಿ ಕಾಣಿಸಿತು.

ಮುಖ್ಯವಾಗಿ ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಕೋರ್ಟ್ ಗೆ ಬರುವವರ ಗುರುತಿನ ಚೀಟಿ ಪರೀಕ್ಷಿಸಿ ಒಳಬಿಡಲಾಗುತ್ತಿದೆ. ಕೋರ್ಟ್ ಗೆ ಬರುವ ವ್ಯಕ್ತಿಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿ ಬಳಿಕ ಒಳಗೆ ಬಿಡಲಾಗುತ್ತಿದೆ. ಕೋರ್ಟ್ ಆವರಣದಲ್ಲಿ ಮೆಟಲ್ ಡಿಟೆಕ್ಟ್ ರ್ ಗಳನ್ನು ಅಳವಡಿಸಲಾಗಿದೆ.

ವಕೀಲೆ ನವಿನಾ ಕೊಲೆಯಾದ ಕೋರ್ಟ್ ನ ಹಾಲ್ ನಂಬರ್ 4ರಲ್ಲಿ ರಕ್ತದ ಕಲೆಗಳನ್ನು ತೊಳೆದು ಸ್ವಚ್ಛಗೊಳಿಸಲಾಯಿತು. ಘಟನಾ ಸ್ಥಳದಲ್ಲಿ ವಕೀಲರು ಹಾಗೂ ಕಕ್ಷಿದಾರರು ಜಮಾಯಿಸಿದ್ದ ಕಾರಣ ಅವರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಪೊಲೀಸರೊಂದಿಗೆ ಸಹಕರಿಸಲು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ ಎನ್ ಪುಟ್ಟೇಗೌಡ ಅವರು ವಕೀಲರನ್ನು ಕೋರಿದ್ದಾರೆ. ಉಳಿದ ಕೋರ್ಟ್ ಆವರಣಗಳಲ್ಲೂ ಭದ್ರತೆ ಒದಗಿಸುವ ಭರವಸೆಯನ್ನು ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು ನೀಡಿದ್ದಾರೆ ಎಂದು ಪುಟ್ಟೇಗೌಡ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+