ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮರ್ನಿಗೆ ಸೋಲುಣಿಸಲು ಸ್ಪೇನ್ ಸಿದ್ಧ

By Mahesh
|
Google Oneindia Kannada News

Fifa EC 2010 SF ;Villa or Klose who will shine
ಡರ್ಬನ್ , ಜು.7: 19ನೇ ಫೀಫಾ ವಿಶ್ವಕಪ್ 2010ನ ಎರಡನೇಉ ಪಾಂತ್ಯ ಪಂದ್ಯವನ್ನು ಫೈನಲ್ ಪಂದ್ಯದಂತೆ ಎಲ್ಲರೂ ಎದುರು ನೋಡುತ್ತಿದ್ದಾರೆ. ಯುರೋಪಿನ ಎರಡು ಬಲಾಢ್ಯ ತಂಡಗಳು ಇಂದು ಮಧ್ಯರಾತ್ರಿ ಕಾದಾಡಲಿವೆ. ಎರಡೂ ತಂಡಗಳು ಪ್ರಶಸ್ತಿಗೆಲ್ಲುವ ಫೇವರಿಟ್ ಎಂಬ ಹೆಗ್ಗಳಿಕೆಯನ್ನು ಗಳಿಸಿ, ಉತ್ತಮ ಪ್ರದರ್ಶನ ನೀಡುತ್ತಾ ಬಂದಿವೆ.

ಸೆಮೀಸ್ ಗೆ ಬಂದ ಹಾದಿ :ಜರ್ಮನಿಯ ಈವರೆಗೂ 13 ಗೋಲುಗಳನ್ನು ದಾಖಲಿಸಿದ್ದರೆ, ಟೂರ್ನಿಯಲ್ಲಿ ಎಲ್ಲಾ ತಂಡಕ್ಕಿಂತ ಹೆಚ್ಚಿನ ಆಕ್ರಮಣಕಾರಿ ಹೋರಾಟವನ್ನು ಸ್ಪೇನ್ ಪ್ರದರ್ಶಿಸಿದೆ. ಜರ್ಮನ್ನರು ಆಸ್ಟೇಲಿಯಾ, ಘಾನ, ಇಂಗ್ಲೆಂಡ್ ಹಾಗೂ ಅರ್ಜೆಂಟೀನಾ ವನ್ನು ಮಣಿಸಿ, ಸೆರ್ಬಿಯಾ ವಿರುದ್ಧ ಸೋತಿದ್ದರು. ಸ್ಪೇನ್ ತಂಡ ಹೊಂಡುರಾಸ್, ಚಿಲಿ, ಪೋರ್ಚುಗಲ್ ಹಾಗೂ ಪೆರುಗ್ವೆಯನ್ನು ಸೋಲಿಸಿ, ಸ್ವಿಜರ್ಲೆಂಡ್ ವಿರುದ್ಧ ಸೋಲಿನ ರುಚಿ ಕಂಡಿದ್ದರು.

ಜರ್ಮನ್ನರು ಉತ್ತಮ ಎದುರಾಳಿಗಳನ್ನು ಎದುರಿಸಿ, ಮಣಿಸಿದ ಅನುಭವ ಪಡೆದರೆ, ಸ್ಪೇನ್ ಗೆ ಪೋರ್ಚುಗಲ್ ಹೊರತು ಪಡಿಸಿದರೆ ಉತ್ತಮ ಎದುರಾಳಿಗಳಿರಲಿಲ್ಲ. ಆದರೆ, ಜರ್ಮನ್ನರು ಬಗ್ಗುಬಡಿಯಲು ಸ್ಪೇನ್ ಗೆಮಾತ್ರ ಸಾಧ್ಯ ಎಂಬುದು ಫುಟ್ಬಾಲ್ ಪಂಡಿತರ ಅಭಿಪ್ರಾಯ.

ಬಲಾಬಲ: ಸ್ಪೇನ್ ಹಾಗೂ ಜರ್ಮನಿ ಪರಸ್ಪರ 20 ಬಾರಿ ಎದುರಾಗಿದ್ದು, ಜರ್ಮನಿ 8 ಬಾರಿ, ಸ್ಪೇನ್ 6 ಬಾರಿ ಗೆದ್ದಿದೆ. 6 ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ. ಆದರೆ, ಯುರೋ 2008ರಲ್ಲಿ ಜರ್ಮನಿಯನ್ನು ಸೋಲಿಸಿ ಇತಿಹಾಸ ಮೆರೆದಿತ್ತು.

ಯುವ ಜರ್ಮನ್ನರ ಆಕ್ರಮಣ:
ಅತ್ಯಧಿಕ ಗೋಲು ಗಳಿಕೆಯ ಸನ್ನಾಹದಲ್ಲಿರುವ ಕ್ಲೋಸ್, ಪೊಡೊಲ್ ಸ್ಕಿ, ಗೊಮೆಜ್ ವುಳ್ಳ ಆಕ್ರಮಣಕಾರಿ ತಂಡ ಯಾವುದೇ ತಂಡದ ಸವಾಲೆದುರಿಸಲು ಸಿದ್ಧ. ಮಿಡ್ ಫೀಲ್ಡ್ ನಲ್ಲಿ ಬಲ್ಲಾಕ್ ಬದಲಿಗೆ ಬಂದಿರುವ ಖದೀರಾ ಉತ್ತಮ ಪ್ರದರ್ಶನ ನೀಡುತ್ತಿರುವುದು ಸ್ವಸ್ಟೈಗರ್ ಬಲ ಹೆಚ್ಚಿದೆ.

ಯುವ ಆಟಗಾರ ಓಜಿಲ್ ಚುರುಕು ಓಟ ಮುಂಪಡೆಗೆ ಸಹಾಯಕವಗಬಲ್ಲುದು. ನಾಯಕ ಫಿಲಿಫ್ ಲಾಹ್ಮ್, ಫೆಡ್ರಿಕ್ ರಕ್ಷಣಾ ವ್ಯೂಹದ ಹೊಣೆ ಹೊತ್ತಿದ್ದಾರೆ. 1-3-4-3 ರಚನೆಯಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಜರ್ಮನ್ನರ ನ್ಯೂನತೆಗಳು: ಅದ್ಭುತ ಲಯದಲ್ಲಿರುವ ಯುವ ಆಟಗಾರ ಥಾಮಸ್ ಮುಲ್ಲರ್ ಸೆಮಿಸ್ ಪಂದ್ಯದಿಂದ ವಂಚಿತರಾಗಿರುವುದು ಜರ್ಮನ್ನರ ದುರ್ದೈವ ಎನ್ನಬಹುದು. ಜರ್ಮನ್ನಿಗೆ ಕಾರ್ನರ್ ಕಿಕ್ ನ ಹೆಡ್ ಮಾಡುವ ಕಲೆ ಸುಲಭ. ಕ್ಲೋಸ್ ಜೊತೆಗೆ 6 ಅಡಿಗೂ ಮೀರಿದ ಎತ್ತರವಿರುವ ಮುಲ್ಲರ್ ಇದ್ದರೆ ಯಾವ ಗೋಲಿಗೂ ಚೆಂಡು ಸಿಗುವುದು ಕಷ್ಟ. ಇದರ ಜೊತೆಗೆ ಜರ್ಮನ್ನರ ಗೋಲಿಯನ್ನು ಕಾಡಿದ ತಂಡಗಳೇ ಕಮ್ಮಿ. ಡಿಫೆನ್ಸ್ ಕೂಡಾ ಕಠಿಣ ಪರೀಕ್ಷೆ ಎದುರಿಸಲಿದೆ.

ಸ್ಪೇನ್ ಎಂದರೆ ಗೂಳಿಗಳ ದಾಳಿ:ಚಿನ್ನದ ಬೂಟಿನ ಮೇಲೆ ಕಣ್ಣಿರಿಸುವ ಡೇವಿಡ್ ವಿಲ್ಲಾ, ಟೊರೆಸ್, ಪೆಡ್ರೋ ಅದ್ಭುತ ಆಕ್ರಮಣಕಾರರು. ಇನ್ನೆಷ್ಟಾ, ಚಾವಿ, ಅಲಾನ್ಸೋ, ಫ್ಯಾಬ್ರಿಗ್ರೆಸ್ , ರಮೋಸ್ ವಿಶ್ವ ಶ್ರೇಷ್ಠ ಮಿಡ್ ಫೀಲ್ಡ್ ಪಡೆ ಎನ್ನಬಹುದು. ರಕ್ಷಣಾ ವ್ಯೂಹದಲ್ಲಿ ಅಲಾನ್ಸೊ,ಪುಯೋಲ್, ಕ್ಯಾಪ್ಡೆವಿಲ್ಲಾ ಅವರನ್ನು ವಂಚಿಸುವುದು ಸುಲಭ ಮಾತಲ್ಲ.ಇನ್ನೂ ಗೋಲಿ ಐಕರ್ ಕ್ಯಾಸಿಲ್ಲಾಸ್ ತನ್ನ ಕಬಂಧ ಬಾಹು ಚಾಚಿ ನಿಂತರೆ ಜರ್ಮನ್ನರಿಗೆ ಕಷ್ಟವೋ ಕಷ್ಟ.

ಸ್ಪೇನ್ ಕೂಡಾ ಸೋಲಬಲ್ಲದು: ಅಕಸ್ಮಾತ್, ಪೆನಾಲ್ಟಿ ಶೂಟೌಟ್ ಎದುರಾದರೆ, ಯಾರನ್ನು ಇಳಿಸಬೇಕು ಎಂಬುದು ಸಮಸ್ಯೆ, ವಿಲ್ಲಾ, ಅಲಾನ್ಸೊ ಈಗಾಗಲೇ ವಿಫಲರಾಗಿದ್ದಾರೆ. ಟೊರೆಸ್ ರನ್ನು ವೈಫಲ್ಯದ ಕಾರಣ ಹೊರಗಿಟ್ಟರೂ ಅಚ್ಚರಿಯೇನಿಲ್ಲ. ಆದರೆ,ಈ ಯುರೋ ಕಪ್ ನಲ್ಲಿ ಜರ್ಮನಿ ವಿರುದ್ಧ ಗೆಲುವು ತಂದುಕೊಟ್ಟಿದ್ದು ಟೊರೆಸ್ ಎಂಬುದನ್ನು ಮರೆಯುವಂತಿಲ್ಲ.

ಫಲಿತಾಂಶ: 1-4-4-2 ರಚನೆಯೊಂದಿಗೆ ಸ್ಪೇನ್ ಕಣಕ್ಕಿಳಿಯುವ ಸಾಧ್ಯತೆ .ಪೌಲ್ ಆಕ್ಟೋಪಸ್ ಕೂಡಾ ಜರ್ಮನಿಯ ಸೋಲನ್ನು ಸೂಚಿಸಿದೆ. ಬುಕ್ಕಿಗಳಿಗೂ ಸ್ಪೇನ್ ಫೇವರಿಟ್ ಎನಿಸಿದೆ. ಸ್ಪೇನ್ ಪ್ರಾಬಲ್ಯದ ಅರಿವು ಜರ್ಮನ್ನರಿಗೂ ಇದೆ. ಜರ್ಮನ್ನಿಯ 1-2 ಅಂತರದಿಂದ ಮಣಿಸಿ ಹಾಲೆಂಡ್ ಅನ್ನು ಎದುರಿಸಲು ಸ್ಪೇನ್ ಸಜ್ಜಾಗುವುದು ಖಂಡಿತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X