ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್ ಪರಿಣಾಮ 13 ಸಾವಿರ ಕೋಟಿ ನಷ್ಟ

By Mahesh
|
Google Oneindia Kannada News

Bharat bandh Photo by :Chandrashekar , Savanur
ನವದೆಹಲಿ, ಜು.6: ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು ಜು.5 ರಂದು ಕರೆ ಕೊಟ್ಟಿದ್ದ 12 ಗಂಟೆಗಳ ಭಾರತ್ ಬಂದ್ ಸಂಪೂರ್ಣ ಯಶಸ್ವಿಯಾಗಿದೆ ಎಂದು ವಿರೋಧ ಪಕ್ಷಗಳು, ಎಡಪಕ್ಷಗಳು ಗೆಲುವಿನ ನಗೆ ಬೀರಿವೆ. ಇತ್ತ ಶ್ರೀಸಾಮಾನ್ಯ ತತ್ತರಿಸಿದ್ದು, ಯರಿಗೂ ಬೇಡದ ವಿಷಯವಾಗಿದೆ. ಬಂದ್ ನಿಂದಾಗಿ ದೇಶಕ್ಕೆ ಸುಮಾರು 13,000 ಕೋಟಿ ರು ನಷ್ಟವಾಗಿದೆ ಎಂದು ಫಿಕ್ಕಿ(FICCI) ಹೇಳಿದೆ.

ಭಾರತೀಯ ಕೈಗಾರಿಕೆಗಳ ಕಾನ್ಫಡರೇಷನ್ ಅನ್ವಯ ಸುಮಾರು 3 ಸಾವಿರ ಕೋಟಿ ನಷ್ಟ ಉಂಟಾಗಿದೆ. ಬಂದ್ ನಿಂಗದಾಗಿ ಮಹಾರಾಷ್ಟ್ರ, ನವದೆಹಲಿ ಹಾಗೂ ಕರ್ನಾಟಕ ಭಾರಿ ನಷ್ಟ ಅನುಭವಿಸಿದೆ. ರಸ್ತೆ, ರೈಲ್ವೆ ಹಾಗೂ ವಿಮಾನಯಾನ ಸಂಚಾರ ಸ್ಥಗಿತಕೊಂಡು ಪ್ರಯಾಣಿಕರು ಪರದಾಡುವಂತಾಗಿತ್ತು.

ಬೆಂಗಳೂರು ಮೂಲದ ಇನ್ಫೋಸಿಸ್ ಟೆಕ್ನಾಲಜೀಸ್ ಗೆ ಸುಮಾರು 50 ಕೋಟಿ ನಷ್ಟವಾಗಿದೆ ಎಂದು ಮಾನವ ಸಂಪನ್ಮೂಲ ಹಿರಿಯ ಅಧಿಕಾರಿ ಟಿವಿ ಮೋಹನ್ ದಾಸ್ ಪೈ ಹೇಳಿದ್ದಾರೆ. ಮತ್ತೊಂದು ದಿನ ಕೆಲಸ ಮಾಡಿ ನಷ್ಟವನ್ನು ಸರಿದೂಗಿಸಬೇಕಾಗಿದೆ ಎಂದರು.

ಸಾರಿಗೆ ನಿಗಮಕ್ಕೆ 12.5 ಕೋಟಿ ರು.ನಷ್ಟ

ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕೂ ವಿಭಾಗದ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ ಪರಿಣಾಮ ನಿಗಮಕ್ಕೆ 12.5 ಕೋಟಿ ರೂ.ನಷ್ಟವಾಗಿದೆ.

ಕೆಎಸ್‌ಆರ್‌ಟಿಸಿಗೆ 5 ಕೋಟಿ ರೂ., ಬಿಎಂಟಿಸಿಗೆ 2.5 ಕೋಟಿ ರೂ. ಎನ್‌ಇಕೆಆರ್‌ಟಿಸಿ ಹಾಗೂ ಎನ್‌ಡಬ್ಲ್ಯುಕೆಆರ್‌ಟಿಸಿಗೆ ತಲಾ 5 ಕೋಟಿ ರೂ. ನಷ್ಟವಾಗಿದೆ.

ಬೆಳಗ್ಗೆ ಬಿಎಂಟಿಸಿಯ ಸುಮಾರು 68 ಬಸ್‌ಗಳಿಗೆ ಜೆ.ಪಿ. ನಗರ, ಮಲ್ಲೇಶ್ವರ, ಕೆ.ಆರ್.ಪುರ, ಪ್ರೇಜರ್‌ಟೌನ್, ಯಶವಂತಪುರ, ಯಲಹಂಕ, ಸುಬ್ರಹ್ಮಣ್ಯಪುರ, ಪೀಣ್ಯ, ನಾಗರಬಾವಿ ಹಾಗೂ ತಿಲಕ್‌ನಗರದಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಬಸ್ ಜಖಂಗೊಂಡು ಸಂಸ್ಥೆಗೆ 7 ಲಕ್ಷ ರೂ. ನಷ್ಟ ಸಂಭವಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X