ಹಾಲಪ್ಪ ಮನೆಗೆ; ವೆಂಕಟೇಶ್ ಗ್ರಹಚಾರ ಶುರು

ವೆಂಕಟೇಶಮೂರ್ತಿ ವಿರುದ್ಧ ಅವರ ಮೊದಲ ಪತ್ನಿ ಸುಮಿತ್ರಾ ಅವರು ವಂಚನೆ ಹಾಗೂ ಹಲ್ಲೆ , ಕೊಲೆ ಬೆದರಿಕೆ ಇದೆ ಎಂದು ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯಲ್ಲಿ ಮೇ. 6 ರಂದು ದೂರು ದಾಖಲಿಸಿದ್ದರು. ವೆಂಕಟೇಶ್ ಮೂರ್ತಿ ಮಾರುತಿ 800 ಕಾರಿನಲ್ಲಿ ಆಗಮಿಸಿ ಬೆದರಿಕೆ ಹಾಕಿದ್ದರೆಂದು ಸುಮಿತ್ರಾ ದೂರಿನಲ್ಲಿ ತಿಳಿಸಿದ್ದರು.
ಈ ದೂರನ್ನಾಧರಿಸಿ ಭಾನುವಾರ ಶಿವಮೊಗ್ಗದ ಗೋಪಾಳ ಬಡಾವಣೆಯಲ್ಲಿ ರುವ ವೆಂಕಟೇಶ್ ಮೂರ್ತಿ ಮನೆ ಎದುರು ನಿಲ್ಲಿಸಿದ್ದ ಮಾರುತಿ 800 ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ ವೆಂಕಟೇಶಮೂರ್ತಿಯನ್ನು ಮಾಳೂರು ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದಾರೆ.
ಈಗ ವೆಂಕಟೇಶಮೂರ್ತಿ ಬಳಿಯಿರುವ ಸುಮಿತ್ರಮ್ಮನವರ ಮೊದಲ ಪುತ್ರ ನೂತನ್‌ನನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ವೆಂಕಟೇಶಮೂರ್ತಿ ತೀರ್ಥಹಳ್ಳಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಹೀಗಾಗಿ ಪೊಲೀಸರು ಬಂಧಿಸುವ ಸಾಧ್ಯತೆಯಿಂದ ಅವರು ಮುಕ್ತವಾಗಿದ್ದಾರೆ.
ಸ್ವಗೃಹಕ್ಕೆ ಹಾಲಪ್ಪ
ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ಆಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ಹಾಲಪ್ಪ ಭಾನುವಾರ ಬಸವೇಶ್ವರ ನಗರದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದ್ದಾರೆ. ಸುಮಾರು 45 ಕ್ಕೂ ಹೆಚ್ಚು ದಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಧಿಕ ರಕ್ತದೊತ್ತಡ, ನಿಶ್ಯಕ್ತಿ ಮುಂತಾದ ಕಾರಣಕ್ಕೆ ಚಿಕಿತ್ಸೆ ಪಡೆದು ನಂತರ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು.












Click it and Unblock the Notifications