ಅತ್ಯಾಚಾರಕ್ಕೆ ವಿರೋಧಿಸಿದ್ದಕ್ಕೆ ಸೀಮೆಎಣ್ಣೆ ಸುರಿದು ಕೊಂದ

Sexual Harassment
ಬೆಂಗಳೂರು, ಜು. 3 : ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾಗಿ ಕುಪಿತಗೊಂಡ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಪತ್ನಿಗೆ ಬೆಂಕಿ ಹಚ್ಚಿ ನಂತರ ತಾನೂ ಬೆಂಕಿ ಹಚ್ಚಿಕೊಂಡ ಆತ್ಮಹತ್ಯೆ ಮಾಡಿಕೊಂಡು ಘಟನೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದಿದೆ.

ಪ್ರಕಾಶ್ ನಗರ 4ನೇ ಮುಖ್ಯರಸ್ತೆ ನಿವಾಸಿ ಕೇಶವನ್(52) ಮೃತಪಟ್ಟ ಕಾಮುಕ. ಈತನ ಕೃತ್ಯಕ್ಕೆ ಬಲಿಯಾದವರು ಲತಾಕುಮಾರಿ(32). ತಮಿಳುನಾಡು ಮೂಲದ ಲತಾಕುಮಾರಿ, ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ಪತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರಕಾಶ್ ನಗರದಲ್ಲಿರುವ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ಕುಮಾರ್ ದಂಪತಿ ವಾಸವಿದ್ದರು. ಇವರಿಗೆ ಮಕ್ಕಳಾಗಿರಲಿಲ್ಲ.

2ನೇ ಮಹಡಿಯಲ್ಲಿ ಕೇಶವನ್ ವಾಸವಾಗಿದ್ದ. ಈತನಿಗೆ ಮೂವರು ಮಕ್ಕಳಿದ್ದು, ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಮಗ ಬೇರೆ ಕಡೆ ವಾಸವಿದ್ದ. ಈತನ ಪತ್ನಿ ಮಗನೊಂದಿಗೆ ವಾಸವಾಗಿದ್ದಾರೆ. ಕುಮಾರ್ ಅವರನ್ನು ಪರಿಚಯಿಸಿಕೊಂಡ ಕೇಶವನ್ ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದ. ಹಾಗಾಗಿ ಲತಾಕುಮಾರಿಯ ಪರಿಚಯವೂ ಆಗಿತ್ತು. ಎರಡೂ ಕುಟುಂಬಗಳ ನಡುವೆ ಆತ್ಮೀಯತೆ ಹೆಚ್ಚಿತ್ತು. ಕುಮಾರ್ ಗುರುವಾರ ಕೆಲಸಕ್ಕೆ ತೆರಳಿದ್ದನ್ನು ಗಮನಿಸಿದ ಕೇಶವನ್ ರಾತ್ರಿ 7.45ರ ಹೊತ್ತಿಗೆ ಲತಾಕುಮಾರಿ ಮನೆಗೆ ಬಂದ.

ಸಲುಗೆಯಿಂದ ಮಾತನಾಡಿಸಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡ ಕೇಶವನ್ ಆಕೆಯೆ ಮೇಲೆ ಅತ್ಯಾಚಾರ ಎಸಗಲು ಮುಂದಾದ, ಅದಕ್ಕೆ ಲತಾಕುಮಾರಿ ತೀವ್ರವಾಗಿ ವಿರೋಧಿಸಿದ್ದಾಳೆ. ಕುಪಿತಗೊಂಡ ಕೇಶವನ್ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ತಾನೂ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾನೆ. ತೀವ್ರ ಗಾಯಗೊಂಡಿಕೊಂಡಿದ್ದ ಲತಾಕುಮಾರಿ ಆಸ್ಪತ್ರೆಗೆ ಸಾಗಿಸುವ ದಾರಿಯ ಮಧ್ಯೆದಲ್ಲಿ ಸಾವನ್ನಪ್ಪಿದ್ದಾರೆ. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+