ಅಪರಾಧಿ ನಾನಲ್ಲ : ಯಡಿಯೂರಪ್ಪ

ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಆಹ್ವಾನ ನೀಡಿದ ಯಡಿಯೂರಪ್ಪ, ಅದಿರು ಅಕ್ರಮ ಸಾಗಣೆಯಾದಿರುವುದನ್ನು ನಾನು ಅಲ್ಲಗೆಳೆಯುವುದಿಲ್ಲ. ತಪ್ಪತಸ್ಥರಿಗೆ ಶಿಕ್ಷೆಯಾಗಲೇಬೇಕು. ಹಗರಣ ಬಯಲಿಗೆಳೆದ ಲೋಕಾಯುಕ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ರಾಜ್ಯದ ಸಂಪತ್ತಿನ ಲೂಟಿಗೆ ಅವಕಾಶ ಕೂಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅದಿರಿನ ಅಕ್ರಮ ಸಾಗಣೆ 2003ರಿಂದ ನಿರಂತರವಾಗಿ ನಡೆದಿದೆ. ಅದನ್ನು ಮುಚ್ಚಿಡಲು ಹೊರಟಿಲ್ಲ. ಆದರೆ, ನೀವು ಅಧಿಕಾರದಲ್ಲಿ ಇದ್ದಾಗ(ಕಾಂಗ್ರೆಸ್) ಏನಾಗಿತ್ತು ? ಏನು ನಡೆದಿತ್ತು ಎಂಬುದನ್ನೂ ನೋಡಿ. ನಾನು ಯಾರ ಕಡೆಗೂ ಬೆರೆಳು ತೋರಿಸುವುದಿಲ್ಲ. ಈ ದಂದೆ ಕೊನೆಯಾಗಬೇಕು. ಒಂದೇ ಒಂದು ಟನ್ ಕೂಡಾ ಹೊರರಾಜ್ಯಕ್ಕೆ ಹೋಗಬಾರದು. ಅದಿರು ಸಾಗಣೆಗೆ ನಾನು ಕುಮ್ಮಕ್ಕು ಕೊಟ್ಟಿಲ್ಲ ಎಂದು ಯಡಿಯೂರಪ್ಪ ವಿವರಿಸಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಾನು ಉಪಮುಖ್ಯಮಂತ್ರಿಯಾಗಿದ್ದಾಗ ತಪ್ಪು ಮಾಡಿದ್ದರೆ ಜೈಲಿಗೆ ಹೋಗಲು ಸಿದ್ಧ. ಸಿಎಂ, ರೆಡ್ಡಿಗಳ ಬಳಗ ಸೇರಿದಂತೆ ಯಾರೇ ತಪ್ಪು ಮಾಡಿದ್ದರೂ ಜೈಲಿಗೆ ಹೋಗಬೇಕು ಎಂದು ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಗುಡುಗಿದ್ದಾರೆ.











Click it and Unblock the Notifications