ಹಾಲಪ್ಪರನ್ನು ಮಂತ್ರಿ ಮಾಡಬೇಕೆ? ಬಿಡಬೇಕೆ?

ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿರುವುದು ಅವರ ವೈಯಕ್ತಿಕ ನಿಲುವಾಗಿದೆ. ಅತ್ಯಾಚಾರ ಆರೋಪ ಎದುರಿಸುತ್ತಿರುವ ಶಾಸಕ ಹಾಲಪ್ಪ ಪ್ರಕರಣ ಇನ್ನು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈಗಲೇ ಯಾರದು ತಪ್ಪು, ಯಾರದು ಸರಿ ಎಂದು ನಿರ್ಧಾರಕ್ಕೆ ಬರಲಾಗದು ಎಂದರು.
ಪ್ರಕರಣದಲ್ಲಿ ಸದ್ಯಕ್ಕೆ ತಪ್ಪು ಮಾಡಿದವರು ಹಾಲಪ್ಪರವರಾಗಿದ್ದರೆ, ಮೇಲ್ನೋಟಕ್ಕೆ ತೊಂದರೆಗೊಳಪಟ್ಟವರು ವೆಂಕಟೇಶ್ ದಂಪತಿಗಳಾಗಿದ್ದು, ತೊಂದರೆಗೊಳಗಾದವರನ್ನೇ ಸಮಾಜದಿಂದ ಬಹಿಷ್ಕಾರ ಹಾಕುವುದು ಸರಿಯಲ್ಲ. ಹಾಗೆಯೇ, ನಿನ್ನೆ ಸುದ್ದಿಗೋಷ್ಠಿ ನಡೆಸಿದವರ್‍ಯಾರು ಸಂಘದ ಅಧಿಕೃತ ನಿರ್ದೇಶಕರಾಗಿಲ್ಲ ಎಂದು ಹೇಳಿದರು.
ಈಡಿಗ ಸಮಾಜದವರೇ ಆದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪರವರನ್ನೇ ನಿನ್ನೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಟೀಕಿಸಿದ್ದಾರೆ. ಆದರೆ ಅವರಿಬ್ಬರು ಇಡೀ ಸಮಾಜಕ್ಕೆ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಇಬ್ಬರು ಮುಖಂಡರು ಜಾತಿಯನ್ನು ಹಿಡಿದುಕೊಂಡು ಕೂತಿರಲಿಲ್ಲ. ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿರುವುದನ್ನು ಮರೆತಂತಿದೆ ಎಂದರು.












Click it and Unblock the Notifications