ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಟ್ಬಾಲ್ ಕ್ರೇಜ್: ಬೆಂಗ್ಳೂರ್ ಹುಡ್ಗ ಆತ್ಮಹತ್ಯೆ ಯತ್ನ!

By Mahesh
|
Google Oneindia Kannada News

FIFA WC 2010 crazy : Bangalore boy attempts suicide
ಬೆಂಗಳೂರು, ಜೂ.25 : ಫುಟ್ಬಾಲ್ ಕ್ರೇಜ್ ಏನೆಲ್ಲಾ ಮಾಡಿಸುತ್ತದೆ. ದೂರದ ಸೊಮಾಲಿಯಾದ ಫುಟ್ಬಾಲ್ ಅಭಿಮಾನಿಗಳು ಜೀವ ಬೆದರಿಕೆ ನಡುವೆ ಟಿವಿಯಲ್ಲಿ ಪಂದ್ಯವೀಕ್ಷಿಸಿ ಸುದ್ದಿಯಾಗಿದ್ದಾರೆ. ನಮ್ಮ ಬೆಂಗಳೂರಿನ ಯುವಕನೊಬ್ಬ ವಿಶ್ವಕಪ್ ಪಂದ್ಯ ವೀಕ್ಷಣೆಗೆ ಅಡ್ಡಿಪಡಿಸಿದ ಕಾರಣಕ್ಕೆ ಬೇಸತ್ತು ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಸೈಂಟ್ ಮೀರಾಸ್ ಇನ್ಸ್ ಸ್ಟಿಟ್ಯೂಟ್ ನ ವಿದ್ಯಾರ್ಥಿಯಾದ 17 ವರ್ಷದ ಯುವಕ ಕೆವಿನ್ ಪೀಟರ್ ಗೆ ಫುಟ್ಬಾಲ್ ಅಂದರೆ ಪಂಚಪ್ರಾಣ. ಆದರೆ, ಮಧ್ಯರಾತ್ರಿಯಾದರೂ ಮಗ ಟಿವಿಗೆ ಅಂಟಿಕೊಂಡು, ಫುಟ್ಬಾಲ್ ಪಂದ್ಯ ವೀಕ್ಷಿಸುವುದನ್ನು ಕಂಡ ಪೋಷಕರು ಆತಂಕಗೊಂಡು ಕೊಂಚ ಜೋರಾಗಿ ಗದರಿಸಿದ್ದಾರೆ.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||

ಮಂಗಳವಾರ ಕಳೆದ ಬಾರಿಯ ರನ್ನರ್ ಅಪ್ ಫ್ರಾನ್ಸ್ ಹಾಗೂ ಅತಿಥೇಯ ದಕ್ಷಿಣ ಆಫ್ರಿಕಾ ಪಂದ್ಯ ಹಾಗೂ ಮೆಕ್ಸಿಕೊ, ಉರುಗ್ವೆ ಪಂದ್ಯವಿತ್ತು. ಈ ಮಹತ್ವದ ಪಂದ್ಯವನ್ನು ನೋಡಲು ಕೆವಿನ್ ಟ್ಯೂಷನ್ ಗೆ ಹೋಗದೇ ಮನೆಗೆ ಬಂದು ಟಿವಿ ಮುಂದೆ ಕೂತಿದ್ದ.

ಇದನ್ನು ನೋಡಿದ ಆತನ ಪೋಷಕರು, ಟಿವಿ ಆಫ್ ಮಾಡಿ ಟ್ಯೂಷನ್ ಗೆ ಹೋಗುವಂತೆ ಹೇಳಿ ಗದರಿಸಿದ್ದಾರೆ. ಪೋಷಕರ ಮಾತಿಗೆ ಪ್ರತಿ ಹೇಳದೆ ತನ್ನ ಕೋಣೆ ಸೇರಿದ ಕೆವಿನ್ , ಜಿರಳೆ ಸಾಯಿಸುವ ಔಷಧಿಯನ್ನು ತೆಗೆದುಕೊಂಡು ಬಾಯಿಗೆ ಸುರಿದುಕೊಂಡಿದ್ದಾನೆ.

ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||

ರಾತ್ರಿ ಸುಮಾರು 9 ಗಂಟೆ ವೇಳೆಗೆ ಊಟಕ್ಕೆ ಕರೆಯಲು ಕೆವಿನ್ ನ ತಾಯಿ ಕೋಣೆಗೆ ಹೋದಾಗ, ಉಸಿರಾಡಲು ತೊಂದರೆಪಡುತ್ತಾ ಬಿದ್ದಿದ್ದ ಮಗನನ್ನು ನೋಡಿ ದಿಗ್ಭ್ರಾಂತರಾಗಿ, ಕೂಡಲೇ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಕೆವಿನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅತ್ಯಹತ್ಯೆ ಪ್ರಯತ್ನ ಎಂದು ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಪೋಷಕರ ಬೈಗುಳದಿಂದ ನೊಂದು ಪ್ರಾಣ ಕಳೆದುಕೊಳ್ಳಲು ಯತ್ನಿಸಿದ ಎಂದು ಮಾಹಿತಿ ಸಿಕ್ಕಿದೆ. ತನಿಖೆ ಮುಂದುವರೆದಿದೆ ಎಂದು ಎಎಸ್ ಐ ವೆಂಕಟೇಶ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X