ಹೋರಾಡುತ್ತಲೇ ಜೈಲು ಸೇರುವೆ; ದೇವೇಗೌಡ
ಬೆಂಗಳೂರು,
ಜೂ. 24: ಮುಖ್ಯಮಂತ್ರಿಗಳೇ, ಈ ದೇವೇಗೌಡ ಸುಮ್ಮನಿರುವವನಲ್ಲ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಒಂದು ಎಕರೆ ಜಮೀನು ಹೆಚ್ಚುವರಿಯಾಗಿ ನೀಡಿದರೂ ಹೋರಾಟ ನಡೆಸಿ ಜೈಲು ಸೇರಲು ನಾನು ಹಿಂಜರಿಯುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸರಕಾರವನ್ನು ಎಚ್ಚರಿಸಿದ್ದಾರೆ. id="toptextpromo">ಬೊಮ್ಮೇಗೌಡ,
ರಾಮೇಗೌಡರ ಭೂಮಿಯನ್ನು ನೈಸ್ ಸಂಸ್ಥೆಗೆ ನೀಡುತ್ತಿಲ್ಲ. ದೇವೇಗೌಡ ಅಥವಾ ಅವರ ಅಪ್ಪನ ಜಮೀನಾಗಲಿ, ಮುಖ್ಯಮಂತ್ರಿಗಳ ಪಿತ್ರಾರ್ಜಿತ ಆಸ್ತಿಯನ್ನು ನೀಡುತ್ತಿಲ್ಲ. ಇದು ರೈತರ ಫಲವತ್ತಾದ ಜಮೀನನ್ನು ನೈಸ್ ಗೆ ನೀಡುತ್ತಿರುವುದು. ದಾವೂದ್ ಇಬ್ರಾಹಿಮ್ ನನ್ನು ಮೀರಿಸುವಷ್ಟು ದೊಡ್ಡ ಡಾಕೂ ಆ ಖೇಣಿ, ಅಗತ್ಯಕ್ಕಿಂತ ಹೆಚ್ಚು ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದ್ದ ಮಹಾನುಭಾವನಿಗೆ ಹೆಚ್ಚುವರಿ ಜಮೀನು ಏಕೆ ಎಂದು ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಉನ್ನತ
ಮಟ್ಟದ ಸಭೆಯಲ್ಲಿ ನೈಸ್ ಸಂಸ್ಥೆಗೆ ಹೆಚ್ಚುವರಿ ಜಮೀನು ನೀಡುವ ಪ್ರಸ್ತಾಪ ಕೈಗೊಂಡಿದ್ದರೆ ಅದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ. ಮತ್ತೆ ನಡೆಯಲಿರುವ ಸಭೆಯಲ್ಲಿ ಒಂದು ವೇಳೆ ಈ ಬಗ್ಗೆ ಏಕಪಕ್ಷೀಯ ನಿರ್ಧಾರ ಕೈಗೊಂಡರೆ ರೈತರ ಜೊತೆಗೂಡಿ ಹೋರಾಟ ನಡೆಸುತ್ತೇನೆ ಎಂದು ಮಾಜಿ ಪ್ರಧಾನಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.











Click it and Unblock the Notifications