ಎಲ್ಲರ ಕಣ್ಣು, ಕ್ಯಾಮೆರಾ ಯಡಿಯೂರಪ್ಪ ಮೇಲೆ
ಬೆಂಗಳೂರು,
ಜೂ.24: ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಆಶ್ರಯದಲ್ಲಿ ಇಂದು ಮಧ್ಯಾನ್ಹ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಪತ್ರಿಕಾ ಸಂದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇತ್ತೀಚಿನ ರಾಜಕೀಯ, ಆಡಳಿತದ ಆಗುಹೋಗುಗಳ ಹಿನ್ನೆಲೆಯಲ್ಲಿ ಬಿ ಎಸ್ ಯಡಿಯೂರಪ್ಪ ಅವರ ಪತ್ರಿಕಾ ಸಂದರ್ಶನ ಕಾರ್ಯಕ್ರಮ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. id="toptextpromo">ಟಿವಿ,
ಮುದ್ರಣ ಮಾಧ್ಯಮ, ಅಂತರ್ ಜಾಲ ಮಾಧ್ಯಮದ ಪ್ರತಿನಿಧಿಗಳು ಮುಖ್ಯಮಂತ್ರಿಗಳು ಮಾಡಬಹುದಾದ ಪ್ರಕಟಣೆಗಳು ಮತ್ತು ಲೋಕಾಯುಕ್ತರ ರಾಜೀನಾಮೆಯಿಂದ ಉದ್ಭವಿಸಿರುವ ಸಮಸ್ಯೆಗಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂಬದುದರ ಮೇಲೆ ಎಲ್ಲರ ಕಣ್ಣ ಮತ್ತು ಕ್ಯಾಮಾರಾ ಇರುತ್ತದೆ. id='are-slot-1' class='oiad oi-axt oiadv'> id='top-searched-articles'>ಇದಲ್ಲದೆ,
ಭಾಜಪ ಸರಕಾರ ಎರಡು ವರ್ಷ ಪೂರೈಸಿರುವ ಸಂದರ್ಭದಲ್ಲಿ ಪಕ್ಷ ಆಚರಿಸಲು ಉದ್ದೇಶಿಸಿರುವ ವಿಜಯೋತ್ಸವದ ಬಗ್ಗೆಯೂ ಯಡ್ಡಿ ವಿವರಣೆ ನೀಡುವ ನಿರೀಕ್ಷೆಯಿದೆ. ಮಂತ್ರಿಮಂಡಲ ಪುನಾರಚನೆಯ ಗುಮ್ಮ ಮತ್ತು ದಂಡಪಿಂಡ ಮಂತ್ರಿಗಳನ್ನು ಹೊರದಬ್ಬಿ ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪತ್ರಿಕಾ ಸಂದರ್ಶನದಲ್ಲಿ ಪ್ರಶ್ನೆಗಳು ಮತ್ತು ನುಣಿಚಿಕೊಳ್ಳುವ ಉತ್ತರಗಳನ್ನು ಓದಲು ನೀವು ಸಿದ್ದರಾಗಿ.











Click it and Unblock the Notifications